ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರದಿಂದ ಸಾಮಾಜಿಕ ಜಾಲತಾಣಗಳು ನಾನಾ ಸಮಸ್ಯೆ ಎದುರಿಸುತ್ತಿವೆ. ಇನ್ಸ್ಟಾಗ್ರಾಮ್ ಇದ್ದಕ್ಕಿದ್ದಂತೆಯೇ ತೊಂದರೆಗೆ ಒಳಗಾದ ಬೆನ್ನಲ್ಲೇ ಇದೀಗ ಟ್ವಿಟರ್ ಭಾರತದ ಕೆಲ ಕಡೆ ಡೌನ್ ಆಗಿದೆ. ಲಾಗಿನ್ ಮಾಡಲಾಗದೆ ಜನ ಪರದಾಡಿದ್ದಾರೆ.
ಈ ಬಗ್ಗೆ ಡೌನ್‌ಡಿಟೆಕ್ಟರ್ ಮಾಹಿತಿ ನೀಡಿದ್ದು, ಡೆಸ್ಕ್‌ಟಾಪ್‌ನಲ್ಲಿ ಟ್ವಿಟರ್ ಬಳಸುವವರಿಗೆ ಸಮಸ್ಯೆ ಹೆಚ್ಚಾಗಿದೆ. ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಸಮಸ್ಯೆ ಎದುರಾಗಿದೆ. ಬಳಕೆದಾರರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಟ್ವಿಟರ್ ಡೌನ್ ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.