ನಗರೋತ್ಥಾನದ ಯೋಜನೆ ಕಾಮಗಾರಿಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ರಹೀಂಖಾನ: ಹೊಸಳ್ಳಿ ಆರೋಪ

ಹೊಸ ದಿಗಂತ ವರದಿ, ಬೀದರ:

ಬೀದರ ನಗರದಲ್ಲಿ ರಸ್ತೆಗಳ ಮತ್ತು ಇತರೆ ಕಾಮಗಾರಿಗಳ ಅಬಿವೃದ್ಧಿ ಪಡಿಸಲು ನಗರೋತ್ಥಾನ ಯೋಜನೆಯಡಿಯಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 2012 ರಲ್ಲಿ ಮಂಜೂರಿ ಮಾಡಿ ನಾಲ್ಕು ಹಂತಗಳಲ್ಲಿ ಅನುದಾನ ಬಿಡುಗಡೆಗೆ ನಿಗದಿಪಡಿಸಿದ್ದರು. ನಂತರದಲ್ಲಿ ಕ್ರಿಯಾಯೋಜನೆಯಂತೆ ಈಶ್ವರ ಖಂಡ್ರೆಯವರು ಸಚಿವರಾಗಿದ್ದಾಗ ಶಂಕುಸ್ಥಾಪನೆಗಳ ನೆರವೇರಿಸಲಾಯಿತು. ನಗರೋತ್ಥಾನ ಸಮಿತಿಯಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ವಿಧಾನ ಪರಿಷತ್, ನಗರಸಭೆ ಸದಸ್ಯರನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ಮುಖಾಂತರ ಅನುದಾನ ವಿನಿಯೋಗ ಆಗುವುದಾಗಿದೆ. ಆದರೆ ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ ಅವರು ನಗರೋತ್ಥಾನದ ಕಾಮಗಾರಿಗಳಿಗೆ ತಾವೇ ಕೋಟಿ ಕೋಟಿ ಹಣ ಕೊಡಿಸಿದ್ದಾಗಿ ಬೀದರ ನಗರದಲ್ಲೆಲ್ಲಾ ಕಟೌಟ್ ಪ್ಲೆಕ್ಸ್ ಗಳನ್ನು ಹಾಕಿ ಮುಗ್ಧ ಆಮಾಯಕ ಜನರಿಗೆ ಮೋಸ ಮಾಡುತಿದ್ದಾರೆ. ಇದನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿಯ ನಗರ ಮಂಡಲ ಅಧ್ಯಕ್ಷ ಮತ್ತು ನಗರಸಭೆಯ ಸದಸ್ಯರಾದ ಶಶಿಧರ ಹೊಸಳ್ಳಿ ಹೇಳಿದರು.

ಅವರು ಬುಧವಾರ ಬೀದರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು. ರಹೀಂಖಾನ ಅವರು ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ನಗರಸಭೆಯ ಸದಸ್ಯರ ಗಮನಕ್ಕೆ ತಾರದೆ ತಮ್ಮ ಸ್ವಂತ ಶಾಸಕರ ಅನುದಾನದಡಿಯಂತೆ ಬಿಂಬಿಸುತ್ತಾ ತಮಗೆ ಬೇಕಾದ ಗುತ್ತಿಗೆದಾರರಿಗೆ ಒಳ ಒಪ್ಪಂದ ಮಾಡಿಕೊಂಡು ಕಳಪೆ ಕಾಮಗಾರಿ ಮಾಡಿಸುವಲ್ಲಿ ನಿರತರಾಗಿದ್ದಾರೆ. ನಗರೋತ್ಥಾನದ ಈ ಎಲ್ಲಾ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಅಧ್ಯಕ್ಷರಾಗಿದ್ದು, ಅವರೇ ಮಾಡಿಸುತ್ತಿದ್ದು, ಅಭಿವೃದ್ಧಿಪಡಿಸುತಿದ್ದಾರೆ. ಈ ಫ್ಲೆಕ್ಸ್ ಗಳಲ್ಲಿ ಸರ್ಕಾರದ ಮತ್ತು ಸಚಿವರ ಹೆಸರುಗಳು ಹಾಕಬೇಕಾಗಿತ್ತು. ಹಾಕಿಲ್ಲ ಎಂದವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯಿಂದ ಬೀದರ ನಗರಕ್ಕೆ ತಲಾ 12 ಲಕ್ಷ ರೂ. ಬೆಲೆ ಬಾಳುವ 12 ಸೌರ ಶಕ್ತಿಯ ಚೌರಸ್ತಾಗಳಲ್ಲಿ ಎರಡು ಹೈಮಾಸ್ಟ್ ಲೈಟಗಳಿದ್ದು, ಹೀಗೆ ಯಾರಿಗೆ ಹೇಳದೆ ಕೇಳದೆ ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಯಾ ವಾರ್ಡ್ ಗಳಲ್ಲಿ ಹಾಕಿಸದೆ ತಮಗೆ ಬೇಕಾದ ಸ್ಥಳಗಳಲ್ಲಿ, ಮತ್ತು ತಮ್ಮವರ ಸ್ಮಶಾನ ಭೂಮಿಗಳಲ್ಲಿ ಮಾತ್ರ ಹಾಕಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಾವು ದೂರು ಪತ್ರ ನೀಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಮನವಿ ಸಲ್ಲಿಸಿದ್ದೇವೆ ಎಂದರು.
ಗೋಷ್ಠಿಯಲ್ಲಿ ಪ್ರಭು ಗ್ಯಾನಪನೋರ, ಕುಂಬಾರವಾಡ, ರಾಜಾರಾಮ ಚಿಟ್ಟಾ, ವಿಕ್ರಮ ಮುದ್ದಳೆ, ಸುಭಷ ಮಡಿವಾಳ, ಗಣೇಶ ಭೊಸಲೆ, ಸಂಗಮೇಶ ಹುಮನಾಬಾದೆ, ರೋಷನ್ ವರ್ಮಾ, ನಿತಿನ ನವಲಕೆಲೆ, ಭುಸಣ ಪಾಠಕ್ ಅವರುಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!