ಗಣರಾಜ್ಯೋತವದ ಪಥಸಂಚಲನದಲ್ಲಿ ಕರ್ನಾಟಕ ಸ್ಥಬ್ಧ ಚಿತ್ರಕ್ಕಿಲ್ಲ ಅವಕಾಶ: ರಾಜ್ಯದಲ್ಲಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತವದಲ್ಲಿ ಕಳೆದ 13 ವರ್ಷಗಳಿಂದ ಪಥಸಂಚಲನದಲ್ಲಿ ಕರ್ನಾಟಕ ಸ್ಥಬ್ಧ ಚಿತ್ರಗಳು ರಾರಾಜಿಸಿತ್ತು. ಆದರೆ ಈ ಬಾರಿ ಕರ್ನಾಟಕದ ಟ್ಯಾಬ್ಲೋಗೆ ಕೇಂದ್ರ ಸರ್ಕಾರದ ಸಮಿತಿ ಅವಕಾಶ ನಿರಾಕರಿಸಿದೆ.

ಇದೀಗ ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ಸಮಿತಿ ಗಣರಾಜ್ಯೋತ್ಸವದ ಪರೇಡ್‌ಗೆ ಸ್ಥಬ್ದಚಿತ್ರಗಳ ಆಯ್ಕೆ ನಡೆಯಲಿದೆ. ಈ ಬಾರಿ ಸಭೆ ಸೇರಿದ ಸಮಿತಿ ಕರ್ನಾಟಕದ ಬದಲು ಬೇರೆ ರಾಜ್ಯಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಕಳೆದ 13 ವರ್ಷಗಳಿಂದ ಕರ್ನಾಟಕಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಹಲವು ರಾಜ್ಯಗಳು ಒಂದು ಬಾರಿಯೂ ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಇತರ ರಾಜ್ಯಗಳಿಗೂ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕದ ಸಾಧಕ ನಾರಿಯರ ಕುರಿತ ಸ್ಥಬ್ಧಚಿತ್ರಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರದ ಸಮಿತಿಗೆ ಪತ್ರ ಬರೆದಿತ್ತು. ಆದರೆ ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರದ ಸಮಿತಿ ಕರ್ನಾಟಕಕ್ಕೆ ಅವಕಾಶ ನಿರಾಕರಿಸಿದೆ. ಕೇರಳ, ತಮಿಳುನಾಡು ಸೇರಿದಂತೆ ಇತರ 13 ರಾಜ್ಯಗಳ ಸ್ಥಬ್ಧಚಿತ್ರಕ್ಕೆ ಅವಕಾಶ ನೀಡಿದೆ.

ಇದೀಗ ಕೇಂದ್ರ ವಿರುದ್ಧ ರಾಜಕೀಯ ಟೀಕಾಪ್ರಹಾರ ಶುರುವಾಗಿದ್ದು, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ. ವಿಶ್ವದಲ್ಲೇ ಇತಿಹಾಸ ಹೊಂದಿರುವ ಪ್ರಗತಿಪರ ರಾಜ್ಯ ಕರ್ನಾಟಕ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಗುಜರಾತ್ ಕೇಂದ್ರಸ್ಥಾನವಾಗಿದೆ. ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಸ್ಪಷ್ಟನೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಹಿಂದಿನ ಬಾರಿ ಪ್ರಶಸ್ತಿ ಬಂದಿತ್ತು. ಈ ಬಾರಿಯೂ ಕರ್ನಾಟಕದ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!