Saturday, April 1, 2023

Latest Posts

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಖಚಿತ : ಬಿಜೆಪಿ ಮುಖಂಡ ಅಶೋಕ್ ಜಯರಾಂ ವಿಶ್ವಾಸ

ಹೊಸ ದಿಗಂತ ವರದಿ, ಮಂಡ್ಯ:

ಪ್ರಸ್ತುತ ಚುನಾವಣೆಯಲ್ಲಿ ಜನಬೆಂಬಲ ನೋಡಿದರೆ ಬಿಜೆಪಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಮುಖಂಡ ಅಶೋಕ್‌ ಜಯರಾಂ ಹೇಳಿದರು.

ನಗರದ ಶಂಕರನಗರದಲ್ಲಿರುವ ಪುಷ್ಪ ಪಾಂಡುರಂಗ ಸಮುದಾಯವನದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಆಯೋಜಿಸಿದ್ದ ನಗರದ 3 ನೇ ಮಹಾಶಕ್ತಿ ಕೇಂದ್ರದ ಬೂತ್ ಸಮಿತಿ ಸದಸ್ಯರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ನೀಡಲು ಜನಸಂಕಲ್ಪಮಾಡಿ ದ್ದಾರೆ. ಇದಕ್ಕೆ ಪೂರಕ, ಪ್ರೇರಕ ಎಂದರೆ ದೇಶದ ಹೆಮ್ಮೆಯ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಜನಪರ ಆಡಳಿತವೇ ಪ್ರೇರಣೆಯಾಗಿದೆ ಎಂದರು.

ಮಂಡ್ಯ ಜಿಲ್ಲೆಗೆ ಪ್ರದಾನಮಂತ್ರಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್‌ಶಾ ಅವರು ಭೇಟಿ ನೀಡಿ ಬಿಜ್ಗೆೆ ಹೊಸ ಶಕ್ತಿ ತುಂಬಿದ್ದಾರೆ, ಉತ್ತಮ ಬೆಳೆವಣಿಯ ದಿನಗಳು ಸೃಷ್ಟಿಯಾಗುತ್ತಿವೆ, ಬಿಜೆಪಿ ಗೆಲುವಿಗೆ ಪೂರಕ ವಾತವರಣ, ಅಭಿವೃದ್ದಿಯ ಅಲೆ, ಬಿಜೆಪಿಯ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಬಿಜೆಪಿ ಜಿಲ್ಲಾ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ನಮ್ಮ ನಾಯಕರಾದ ಜಿಲ್ಲೆಯ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಿದರು, ಮೈಶುಗರ್ ಉಳಿವು ಮತ್ತು ಅಭಿವೃದ್ದಿ ಗಾಗಿ ಕೋಟ್ಯಾಂತರ ರೂಗಳನ್ನು ನೀಡಿ ದರೂ ಬೊಬ್ಬೆ ಹೊಡೆಯುವವರು ಕಡಿಮೆ ಯಾಗಿಲ್ಲ ಎಂದರು.

ನಗರ ಅಭಿವೃದ್ದಿಗೆ 60 ಕೋಟಿ ರೂ. ಅನುದಾನ ಬಂತು, ರಸ್ತೆ ಗುಂಡಿಗಳು ಮುಚ್ಚಿ, ಸುಗಮ ರಸ್ತೆಗಳನ್ನು ನೋಡ ಬಹುದಾಗಿದೆ, ರಸ್ತೆಗಳು, ಬೀದಿಗಳು ನೋಡಲಿಕ್ಕೆ ಓಡಾಡಲಿಕ್ಕೆ ಸಾಧ್ಯವಾಗುತ್ತಿದೆ, ಇದು ಬಿಜೆಪಿ ಸರ್ಕಾರ ನೀಡಿದ ಅಭಿವೃದ್ದಿ ಯಲ್ಲವೇ ಎಂದು ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

2023ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಿರುತ್ತದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ, ಇದನ್ನು ಮತದಾರರು ಗಮನಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, 3ನೇ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಪುಟ್‌ಬಾಲ್‌ಮಂಜು, ನರಸಿಂಹ, ಹರ್ಷ, ಚಾಮರಾಜ್,ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!