ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆ ಉದ್ಘಾಟನೆ: ಸಿದ್ಧತೆ ವೀಕ್ಷಿಸಿದ ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ ಕಲಬುರಗಿ: 

ನಾಳೆ ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಎನ್.ವಿ.ಮೈದಾನದಲ್ಲಿ ನಡೆಯಲಿರುವ ಗೃಹಜ್ಯೋತಿ ಯೋಜನೆಯ ಉದ್ಗಾಟನಾ ಸಮಾರಂಭದ ವೇದಿಕೆ ಮತ್ತು ಇತರೆ ತಯಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖಗೆ೯ಯವರು ಶುಕ್ರವಾರ ಬೆಳಿಗ್ಗೆ ಖುದ್ದಾಗಿ ತೆರಳಿ ವೀಕ್ಷಣೆ ಮಾಡಿದರು.

ಸಮಾರಂಭದಲ್ಲಿ ಬರುವ ಫಲಾನುಭವಿಗಳಿಗೆ, ಅತಿಥಿ ಗಣ್ಯರಿಗೆ ಮತ್ತು ಸಾವ೯ಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗಲಾರದಂಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಾಳೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಹತ್ತು ಜನರಿಗೆ ಉಚಿತ ವಿದ್ಯುತ್ ಬಿಲ್ ನೀಡುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಲಿದ್ದು,ಇವೊಂದು ಕಾಯ೯ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾಜ್೯ ಸೇರಿದಂತೆ ಇತರೆ ಸಚಿವರುಗಳು ಭಾಗಿಯಾಗಲಿದ್ದಾರೆ.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ,ಜೇಸ್ಕಾಂ,ನ ರಾಹುಲ್ ಪಾಂಡ್ವೆ,ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ್ ಗುತ್ತೇದಾರ್, ಮುಖಂಡ ಸುಭಾಷ್ ರಾಠೋಡ್ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!