ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ನೂತನ ಕಾರ್ಯಾಲಯ ಉದ್ಘಾಟನೆ: ಅಭಿವೃದ್ಧಿಗೆ ಕೈಜೋಡಿಸಿ- ದ್ವಾರಕಾನಾಥ್

ಹೊಸದಿಗಂತ ವರದಿ ಕಲಬುರಗಿ:

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಲಬುರಗಿಯ ನೂತನ ಕಾರ್ಯಾಲಯದ ಉದ್ಘಾಟನೆ ನಗರದ ಹೊರವಲಯದ ಶರಣ ಸಿರಸಿಗಿಯಲ್ಲಿ ಆಗಿದ್ದು, ಪರಿಷತ್ ಕಾಯ೯ಕ್ಕೆ ಎಲ್ಲ ಹಿತೈಷಿಗಳು ಕೈ ಜೋಡಿಸಬೇಕೆಂದು ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ಎ.ಆರ್.ದ್ವಾರಕಾನಾಥ್ ಮನವಿ ಮಾಡಿದರು.

ತದನಂತರ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, 1965 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ರಾಷ್ಟ್ರೋತ್ಥಾನ ಪರಿಷತ್ ಪ್ರಾರಂಭದಲ್ಲಿ ಸಾಹಿತ್ಯ ಪ್ರಕಾಶನ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ನಂತರ ಶಿಕ್ಷಣ, ಸೇವೆ, ಗೋಸೇವಾ, ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಸ್ತರಿಸಿಕೊಂಡಿದೆ ಎಂದರು.

ಭಾರತೀಯ ಮೌಲ್ಯಗಳನ್ನು ಶಿಕ್ಷಣದ ಮುಖಾಂತರ ಬಿತ್ತುವ ಕಾರ್ಯದಲ್ಲಿ ರಾಷ್ಟ್ರೋತ್ಥಾನ ತೊಡಗಿಸಿಕೊಂಡಿದೆ. ಅದರ ಭಾಗವಾಗಿ ಕಲಬುರಗಿ ಹೊರವಲಯದ ಶರಣ ಸಿರಸಗಿಯಲ್ಲಿಯೂ ರಾಷ್ಟ್ರೋತ್ಥಾನದ ಶಾಲೆಯು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯಲ್ಲಿ ನರ್ಸರಿ ಇಂದ 6 ನೇ ತರಗತಿಯ ವರೆಗೆ ಸಿ ಬಿ ಎಸ್ ಸಿ ಮಾಧ್ಯಮದಲ್ಲಿ ಮೊದಲನೆ ಹಂತದಲ್ಲಿ ಪ್ರಾರಂಭಗೊಳ್ಳುವುದು ಎಂದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ ಬಿ ಎಸ್ ಸಿ ಶಾಲೆಯು ಶರಣ ಸಿರಸಿಗಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದಲ್ಲಿ ಪ್ರಾರಂಭವಾಗುತ್ತಿದ್ದು 2023-24 ನೇ ಸಾಲಿನ ಅಡ್ಮಿಶನ್ ಪ್ರಾರಂಭವಾಗಿದೆ. ಆಸಕ್ತರು ಶರಣ ಸಿರಸಿಗಿಯ ರಾಘವೇಂದ್ರ ಕಾಂಪ್ಲೆಕ್ಸಿನಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯಾಲಯಕ್ಕೆ ಭೇಟಿ ನೀಡಲು ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!