ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆ ಸುದೀಪ್, ನಾವು ಸೆಲೆಬ್ರಿಟಿಗಳು ಜನ ಮೊಟ್ಟೆ, ಕಲ್ಲು, ಹಾರ ಯಾವುದೇ ಹಾಕಿದ್ರೂ ಹ್ಯಾಂಡಲ್ ಮಾಡೋಕೆ ರೆಡಿ ಇರಬೇಕು ಎಂದು ರಶ್ಮಿಕಾಗೆ ಹೇಳಿದ್ದರು.
ಈ ಬಗ್ಗೆ ರಶ್ಮಿಕಾ ಮಾತನಾಡಿದ್ದು, ಸುದೀಪ್ ಅವರು ಹೇಳಿದ್ದು100% ಸತ್ಯ. ಆದರೆ ಕಲ್ಲು ಹೊಡೆತ ಬಿದ್ದು ರಕ್ತ ಬಂದರೂ ಸುಮ್ಮನಿರೋದು ಹೇಗೆ, ಇದು ಕಷ್ಟ ಎಂದು ರಶ್ಮಿಕಾ ಮಾತನಾಡಿದ್ದಾರೆ.
ಕಾಂತಾರಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಾಗ ರಶ್ಮಿಕಾ ಸಿನಿಮಾ ನೋಡಿಲ್ಲ ಎಂದು ರಿಷಬ್ ಫ್ಯಾನ್ಸ್ ರಶ್ಮಿಕಾ ವಿರುದ್ಧ ಗರಂ ಆಗಿದ್ದರು. ಈ ಬಗ್ಗೆ ಸುದೀಪ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲವೂ ಕಾಮನ್ ಎಂದಿದ್ದರು. ನನಗೆ ದೊಡ್ಡ ಮಟ್ಟದಲ್ಲಿ ನೋವಾದಾಗ ಪ್ರತಿಕ್ರಿಯೆ ನೀಡಲೇ ಬೇಕಾಯ್ತು ಎಂದು ರಶ್ಮಿಕಾ ಹೇಳಿದ್ದಾರೆ.