ರಾಮಮಂದಿರ ಉದ್ಘಾಟನೆ ದೈವಿಕ ಕನಸನ್ನು ನನಸಾಗಿಸಿದೆ: ಎಲ್‌ಕೆ ಅಡ್ವಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ (Ayodhya) ರಾಮಮಂದಿರದ ಉದ್ಘಾಟನೆಯು ದೈವಿಕ ಕನಸನ್ನು ನನಸಾಗಿಸಿದೆ ಎಂದು ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ( LK Advani), ಹೇಳಿದ್ದಾರೆ.

ಹಿಂದಿ ಸಾಹಿತ್ಯ ಪತ್ರಿಕೆಯಾದ ರಾಷ್ಟ್ರಧರ್ಮದಲ್ಲಿ ಪ್ರಕಟವಾಗಲಿರುವ ಲೇಖನದಲ್ಲಿ ಎಲ್‌ಕೆ ಅಡ್ವಾಣಿಯವರು ಈ ರೀತಿ ಹೇಳಿದ್ದಾರೆ.

‘ರಾಮ ಮಂದಿರ ನಿರ್ಮಾಣ – ದೈವಿಕ ಕನಸಿನ ಈಡೇರಿಕೆ ‘ ಎಂಬ ಶೀರ್ಷಿಕೆ ಇರುವ ಅಡ್ವಾಣಿಯವರ ಲೇಖನವಿರುವ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಜನವರಿ 16 ರಂದು ಮುದ್ರಿಸಲಾಗುವುದು. ಈ ವಿಶೇಷ ಸಂಚಿಕೆಯನ್ನು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಮಾರಂಭಕ್ಕೆ ಆಹ್ವಾನಿಸಿದ ಅತಿಥಿಗಳಿಗೆ ನೀಡಲಾಗುವುದು.

ಪತ್ರಿಕೆಯ ಸಂಪಾದಕರೊಂದಿಗಿನ ಸಂವಾದದಲ್ಲಿ ಅಡ್ವಾಣಿ ಅವರು ಆ ಸಮಯದಲ್ಲಿ (ಸೆಪ್ಟೆಂಬರ್ 1990 ರಲ್ಲಿ, ರಥ ಯಾತ್ರೆ ಪ್ರಾರಂಭವಾದ ಕೆಲವು ದಿನಗಳ ನಂತರ) ಅಯೋಧ್ಯೆಯಲ್ಲಿ ಒಂದು ದಿನ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂದು ವಿಧಿ ನಿರ್ಧರಿಸಿದೆ ಎಂದು ನಾನು ಭಾವಿಸಿದೆ. ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ. ‘ರಥಯಾತ್ರೆ’ ಪ್ರಾರಂಭವಾದ ಕೆಲವು ದಿನಗಳ ನಂತರ, ನಾನು ಕೇವಲ ಸಾರಥಿ ಎಂದು ನಾನು ಅರಿತುಕೊಂಡೆ. ಯಾತ್ರೆಯೇ ಮುಖ್ಯ ಸಂದೇಶವಾಗಿತ್ತು.. ಅದು ರಾಮನ ಜನ್ಮಸ್ಥಳಕ್ಕೆ ಹೋಗುತ್ತಿರುವ ಕಾರಣ ‘ರಥ’ ಪೂಜೆಗೆ ಅರ್ಹವಾಗಿದೆ ಎಂದಿದ್ದಾರೆ.

ವಾಜಪೇಯಿ ಇರಬೇಕಿತ್ತು : ರಾಮ ಮಂದಿರ ಸಾಕಾರವಾಗುತ್ತಿದೆ. ಇಂಥದ್ದೊಂದು ಕ್ಷಣವನ್ನು ನೋಡಲು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇರಬೇಕಿತ್ತು. ತಮಗೆ ಅವರ ಅನುಪಸ್ಥಿತಿ ಕಾಡುತ್ತಿದೆ ಎಂದೂ ಅಡ್ವಾಣಿ ಹೇಳಿದ್ದಾರೆ.

ನರೇಂದ್ರ ಮೋದಿಯನ್ನು ಶ್ರೀರಾಮನೇ ಆಯ್ಕೆ ಮಾಡಿದ್ದಾನೆ: ಹಿಂದಿನ ದಿನಗಳನ್ನು ನೆನೆಸಿಕೊಂಡ ಬಿಜೆಪಿ ಹಿರಿಯ ನಾಯಕ, ಇಂದು ಐತಿಹಾಸಿಕ ರಥಯಾತ್ರೆಗೆ 33 ವರ್ಷವಾಗಿದೆ. 1990ರ ಸೆಪ್ಟೆಂಬರ್‌ 25ರ ಬೆಳಗ್ಗೆ ರಥಯಾತ್ರೆ ಆರಂಭವಾಗಿತ್ತು. ನಿಜವಾಗಿಯೂ ಹೇಳುತ್ತೇನೆ, ಈ ಯಾತ್ರೆಯನ್ನು ಆರಂಭ ಮಾಡಿದ ದಿನ, ಭಗವಾನ್‌ ರಾಮನ ಮೇಲಿನ ನಂಬಿಕೆ ದೇಶದಲ್ಲಿ ಚಳವಳಿ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ನಮಲ್ಲಿದ್ದ ಯಾರಿಗೂ ಅನಿಸಿರಲಿಲ್ಲ. ರಥಯಾತ್ರೆಯ ವೇಳೆ ಈಗಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸಹಾಯಕರಾಗಿದ್ದರು. ಇಡೀ ರಥಯಾತ್ರೆಯ ಪ್ರಯಾಣದಲ್ಲಿ ಅವರು ನನ್ನ ಜೊತೆಗಿದ್ದರು. ಅಂದು ಅವರು ಇಷ್ಟು ಪ್ರಸಿದ್ಧರಾಗಿರಲಿಲ್ಲ. ಆದರೆ, ಅದಾಗಲೇ ರಾಮ ಮಾತ್ರ ತನ್ನ ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ವಿಶೇಷ ಭಕ್ತನನ್ನು ಆರಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.

ಅಡ್ವಾಣಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!