Thursday, June 30, 2022

Latest Posts

ಸೋಮವಾರಪೇಟೆ-ಶಾಂತಳ್ಳಿ ರಸ್ತೆ ಉದ್ಘಾಟನೆ

ಹೊಸದಿಗಂತ ವರದಿ, ಸೋಮವಾರಪೇಟೆ:
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ‌ ಅಭಿವೃದ್ಧಿಪಡಿಸಿರುವ ಸೋಮವಾರಪೇಟೆ- ಶಾಂತಳ್ಳಿ ರಸ್ತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೋಮವಾರ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರು.
ಸೋಮವಾರಪೇಟೆಯಿಂದ ಆಲೆಕಟ್ಟೆ ಮಾರ್ಗವಾಗಿ‌ ಶಾಂತಳ್ಳಿಗೆ ತೆರಳುವ ರಸ್ತೆಯನ್ನು ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸೋಮವಾರ ಉದ್ಘಾಟಿಸಲಾಯಿತು.
ಈ ಸಂದರ್ಭ ಚೌಡ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ ತಿಮ್ಮಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲ ಅಭಿಯಂತರ ಮೋಹನ್ ಕುಮಾರ್, ಅಭಿಯಂತರ ರಾಮಣ್ಣಗೌಡ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss