Thursday, September 21, 2023

Latest Posts

ಕಲಬುರಗಿಯಲ್ಲಿ ನಿರಂತರ ಮಳೆ: ಮನೆ ಗೊಡೆ ಕುಸಿತ

ಹೊಸದಿಗಂತ ವರದಿ,ಕಲಬುರಗಿ :

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮನೆಗಳು ತೇವಾಶಗೊಂಡು ಮನೆ ಗೋಡೆ‌ಗಳು ಕುಸಿದು ಬೀಳುತ್ತೀವೆ.

ನಗರದ ಶಹಬಜಾರ್ ಪ್ರದೇಶದ ಡೆಂಗಿ ಗಲ್ಲಿಯಲ್ಲಿ ಪರಮೇಶ್ವರ್ ಎಂಬುವರ ಮನೆ ಗೋಡೆ ಕುಸಿದು ಬಿದಿದ್ದೆ. ಮನೆಯಲ್ಲಿ ಯಾರು ಇಲ್ಲದಿದ್ದ ಸಂಧರ್ಭದಲ್ಲಿ ಗೋಡೆ ಕುಸಿದು ಬಿದಿದ್ದರಿಂದ ದೊಡ್ಡ ದುರಂತ ಒಂದು ತಪ್ಪದಂತಾಗಿದೆ. ಆದರೆ, ಬೈಕ್ ಮೇಲೆ ಗೋಡೆ ಕುಸಿದ ಪರಿಣಾಮ ಬೈಕ್ ನುಜ್ಜುಗುಜ್ಜು ಆಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದ್ದು, ಇನ್ನು ಒಂದು ವಾರ ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಮುಂದುವರಿಯುವ ಮುನ್ಸೂಚನೆ ಜಿಲ್ಲಾಡಳಿತ ನೀಡಿದೆ.

ಸ್ಥಳಕ್ಕೆ ಶಾಸಕಿ ಭೇಟಿ:
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಶಹಾಬಜಾರ ಡೆಂಗಿ ಗಲ್ಲಿಯಲ್ಲಿ ಪರಮೇಶ್ವರ್ ಡೆಂಗಿ ಅವರ ಮನೆಯ ಗೊಡೆ ಉರುಳಿಬಿದ್ದ ಸ್ಥಳಕ್ಕೆ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಭೇಟಿ ಪರಿಶೀಲನೆ ನಡೆಸಿದರು.ಸಂಬಂಧ ಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಚಚಿ೯ಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಪಾಲಿಕೆ ಸದಸ್ಯ ರಹೀಖಾನ್,ಕಾಂಗ್ರೆಸ್ ಮುಖಂಡ ಮಜರ್ ಆಲಂಖಾನ್ ಜೊತೆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!