ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಇತ್ತ ಪಂಜಾಬ್ ನಲ್ಲಿ ಸೋಮವಾರ 1,250 ಗದ್ದೆಯಲ್ಲಿ ಹುಲ್ಲು ಸುಡುವ ಪ್ರಕರಣಗಳನ್ನು ವರದಿ ಮಾಡಿದೆ.
ಒಂದೇ ದಿನದಲ್ಲಿ ಸೀಸನ್‌ನ ಅತಿ ಹೆಚ್ಚು ಹುಲ್ಲು, ಕಸ, ಕಡ್ಡಿ, ಕೋಲು-ಸುಡುವಿಕೆಯ ಸಂಖ್ಯೆಯನ್ನು ಸೂಚಿಸುತ್ತದೆ. ಇದರೊಂದಿಗೆ ರಾಜ್ಯದಲ್ಲಿ ಹುಲ್ಲು ಸುಡುವ ಪ್ರಕರಣಗಳ ಒಟ್ಟು ಸಂಖ್ಯೆ 9,655 ಕ್ಕೆ ತಲುಪಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯಕ್ಕೆ ಗದ್ದೆಯಲ್ಲಿ ಹುಲ್ಲು ಸುಡುವಿಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನವೆಂಬರ್ 6 ರಂದು ಕೇಂದ್ರ ಸರ್ಕಾರವು ಬೆಳೆ ಅವಶೇಷಗಳನ್ನು ಸುಡುವ ರೈತರಿಗೆ ದಂಡವನ್ನು ದ್ವಿಗುಣಗೊಳಿಸಿದೆ.
ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ದಂಡವನ್ನು 30,000 ರೂ., ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 2,500 ರೂ.ನಿಂದ 5,000 ರೂ.ಗಳ ಪರಿಸರ ಪರಿಹಾರವನ್ನು ಪಾವತಿಸಬೇಕಾಗುತ್ತದೆ.
ಇವತ್ತು ಒಂದೇ ದಿನ 1250 ಹುಲ್ಲು ಸುಟ್ಟವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.