ಗುರುವಾಯೂರು ಶ್ರೀಕ್ಷೇತ್ರದ ಆದಾಯದಲ್ಲಿ ಏರಿಕೆ: ಭಕ್ತರಿಂದ ಹರಿದುಬಂತು 5,21,68,713 ರೂ. ಕಾಣಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಗುರುವಾಯೂರು ಶ್ರೀಕ್ಷೇತ್ರದ ಆದಾಯದಲ್ಲಿ ಏರಿಕೆಯಾಗಿದೆ.
ಈ ಬಾರಿ ಒಟ್ಟು  5,21,68,713 ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದ್ದರೆ, 2.526 ಕೆಜಿ ಚಿನ್ನ ಮತ್ತು 18.380 ಕೆಜಿ ಬೆಳ್ಳಿ ಲಭಿಸಿದೆ ಎಂದು ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಎಸ್‌ಬಿ ಗುರುವಾಯೂರು ಶಾಖೆಯು ಕಾಣಿಕೆ ಹಣದ ಎಣಿಕೆಯ ಹೊಣೆ ಹೊತ್ತಿತ್ತು. ಇನ್ನು ದೇವಾಲಯದ ಇ-ಭಂಡಾರ ಆದಾಯ 7.22 ಲಕ್ಷ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!