ಹೊಸದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಮುಂದುವರಿದಿದ್ದು ಮಂಗಳವಾರ ಸೋಂಕಿನಿಂದ ಹಳಿಯಾಳದಲ್ಲಿ ಒಂದು ಸಾವು ಸಂಭವಿಸಿರುವುದು ವರದಿಯಾಗಿದೆ.
ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 104 ಪ್ರಕರಣಗಳು ದಾಖಲಾಗಿದ್ದು ಕಾರವಾರದಲ್ಲಿ 33, ಅಂಕೋಲಾದಲ್ಲಿ 8, ಕುಮಟಾದಲ್ಲಿ 13, ಹೊನ್ನಾವರದಲ್ಲಿ 19, ಭಟ್ಕಳ 4, ಶಿರಸಿ 11, ಯಲ್ಲಾಪುರ 3, ಹಳಿಯಾಳ 5, ಮತ್ತು ಜೊಯಿಡಾ 8 ಪ್ರಕರಣಗಳು ದೃಡಪಟ್ಟಿದ್ದು ಹಳಿಯಾಳದಲ್ಲಿ ಒಂದು ಕೋವಿಡ್ ಮರಣ ದಾಖಲಾಗಿದೆ.
ಕಾರವಾರದಲ್ಲಿ ಅತಿ ಹೆಚ್ಚು 180 ಸಕ್ರಿಯ ಸೋಂಕಿತರು ಇದ್ದು ಅಂಕೋಲಾ 19, ಕುಮಟಾ 38, ಹೊನ್ನಾವರ 35, ಭಟ್ಕಳ 37,
ಶಿರಸಿ 48, ಸಿದ್ಧಾಪುರ 10, ಯಲ್ಲಾಪುರ 11, ಮುಂಡಗೋಡ 9, ಹಳಿಯಾಳ 18, ಮತ್ತು ಜೊಯಿಡಾದಲ್ಲಿ 9 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 414 ಕ್ಕೆ ತಲುಪಿದೆ.