ಸೆಮಿಕಂಡಕ್ಟರ್‌ ಪೂರೈಕೆಯಲ್ಲಿ ಹೆಚ್ಚಳ: ಚೇತರಿಸಿಕೊಳ್ಳುತ್ತಿವೆ ಭಾರತದ ವಾಹನ ಉದ್ದಿಮೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಸೆಮಿಕಂಡಕ್ಟರ್‌ ಗಳ ಅಲಭ್ಯತೆಯಿಂದ ನೆಲಕಚ್ಚಿದ್ದ ಭಾರತದ ವಾಹನ ಉದ್ಯಮವು ಇದೀಗ ಚೇತರಿಸಿಕೊಳ್ಳುತ್ತಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಇದುವರೆಗಿನ ಮಾಸಿಕ ರವಾನೆಗಳಲ್ಲಿ ಅತಿ ದೊಡ್ಡ ರವಾನೆಗೆ ಬಾರತದ ವಾಹನ ಉದ್ದಿಮೆಗಳು ಸಜ್ಜಾಗುತ್ತಿದೆ.

ಜುಲೈನಲ್ಲಿ ಸೆಮಿಕಂಡಕ್ಟರ್‌ ಚಿಪ್‌ ಗಳ ಪೂರೈಕೆಯು ಸುಧಾರಿಸಿರುವುದರಿಂದ ಉತ್ಪಾದನಾ ವೇಗವು ಹೆಚ್ಚಾಗಿದೆ. ಕಾರುಗಳು, suvಗಳು ಮುಂತಾದ ವಾಹನಗಳಿಗಾಗಿ ಸುಮಾರು 7 ಲಕ್ಷ ಗ್ರಾಹಕರು ಕಾಯುತ್ತಿದ್ದಾರೆ. ಉತ್ಪಾದನೆಯಲ್ಲಿ ವೇಗವಾಗರುವುದರಿಂದ ಈ ತಿಂಗಳ ಅಂತ್ಯದಿಂದ ಸುಮಾರು 25,000 ಕೋಟಿ ರೂ. ಮೌಲ್ಯದ 3,50,000 ಘಟಕಗಳು ರವಾನೆಗೆ ಸಿದ್ಧವಾಗುತ್ತಿವೆ. ಹಿಂದಿನ ದಾಖಲೆಗೆ ಹೋಲೀಸಿದರೆ ಒಂದು ತಿಂಗಳಿನಲ್ಲಿ ಇದು ಗಣನೀಯ ಹೆಚ್ಚಳವಾಗಿದ್ದು ಈ ಹಿಂದೆ 2020 ರ ಅಕ್ಟೋಬರ್‌ನಲ್ಲಿ 3,34,000 ಯುನಿಟ್‌ಗಳ ಗರಿಷ್ಠ ಸಂಖ್ಯೆ ದಾಖಲಾಗಿತ್ತು.

ಕಳೆದ ಐದು ವರ್ಷಗಳ ಜುಲೈ ತಿಂಗಳಿನ ಮಾರಾಟಕ್ಕೆ ಹೋಲಿಕೆ ಮಾಡಿದರೆ ಈ ಸಂಖ್ಯೆಯು 200,000 ರಿಂದ 299,000 ಯುನಿಟ್‌ಗಳಷ್ಟಿತ್ತು. ಕಳೆದೊಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಸೆಮಿಕಂಡಕ್ಟರ್‌ ಚಿಪ್ಪುಗಳ ಕೊರತೆಯಿಂದಾಘಿ ಬೇಡಿಕೆಯ ಮಟ್ಟವನ್ನು ಪೂರೈಸುವಲ್ಲಿ ಉತ್ಪಾದಕ ಕಂಪನಿಗಳು ಸಫಲವಾಗಿರಲಿಲ್ಲ. ಅಲ್ಲದೇ ಚಿಪ್‌ಗಳ ಅಲಭ್ಯತೆಯಿಂದ ಉತ್ಪಾದನೆಯನ್ನು ಕಡಿತಗೊಳಿಸಬೇಕಾಯಿತು.

ಆದರೆ ಚಿಪ್‌ ಗಳ ಪೂರೈಕೆಯು ಸುಧಾರಿಸುತ್ತಿರುವುದರಿಂದ ಉತ್ಪಾದಕೆತೆಗೂ ವೇಗ ದೊರೆತಿದ್ದು ಹೆಚ್ಚಿನ ಔಟ್‌ ಪುಟ್‌ ನೀಡಲು ಸಾಧ್ಯವಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!