ಕೇರಳದ ಆಲಪ್ಪುಳದಲ್ಲಿ ಹೆಚ್ಚುತ್ತಿರುವ ಬರ್ಡ್ ಫಿವರ್: 45,631 ಹಕ್ಕಿಗಳಿಗೆ ‘ಮರಣ ದಂಡನೆ’ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಆಲಪ್ಪುಳದಲ್ಲಿ ಕೋಳಿ ಜ್ವರ ಇನ್ನಷ್ಟು ವ್ಯಾಪಿಸುವ ಆತಂಕದ ಹಿನ್ನೆಲೆಯಲ್ಲಿ ಸೋಂಕು ಬಾಧಿತ ಹಕ್ಕಿಗಳ ಸಂಹಾರಕ್ಕೆ ಆಡಳಿತ ಮುಂದಾಗಿದೆ.

ಅಂಬಲಪುಳ ಉತ್ತರ ಗ್ರಾಮ ಪಂಚಾಯಿತಿಯ ಏಳನೇ ವಾರ್ಡ್, ಎಡತ್ವ ಗ್ರಾಮ ಪಂಚಾಯಿತಿಯ ಹತ್ತನೇ ವಾರ್ಡ್ ಹಾಗೂ ತಕಳಿ ಗ್ರಾಮ ಪಂಚಾಯಿತಿಯ ನಾಲ್ಕನೇ ವಾರ್ಡ್‌ನಲ್ಲಿ ಹಕ್ಕಿಗಳನ್ನು ಕೊಂದು ಸೂಕ್ತ ರೀತಿಯಲ್ಲಿ ದಫನ ಮಾಡಲು ಜಿಲ್ಲಾಧಿಕಾರಿ ನೇತೃತ್ವದ ಸಭೆ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಅಂಬಲಪುಳದಲ್ಲಿ 790, ಎಡತ್ವದಲ್ಲಿ 33,474, ತಕಳಿಯಲ್ಲಿ 10,867 ಹಕ್ಕಿಗಳು ಸೇರಿದಂತೆ ಒಟ್ಟು 45,631 ಹಕ್ಕಿಗಳಿಗೆ ‘ಮರಣ ದಂಡನೆ’ ಜಾರಿಯಾಗಿದೆ. ಇನ್ನು ಹಕ್ಕಿಗಳನ್ನು ಸಂಹಾರ ಮಾಡುವ ಸಿಬ್ಬಂದಿಗಳಿಗೆ ಹತ್ತು ದಿನಗಳ ಕಾಲ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಅಂಬಲಪುಳದಲ್ಲಿ ಮೂರು, ಎಡತ್ವದಲ್ಲಿ ಹನ್ನೊಂದು, ತಕಳಿಯಲ್ಲಿ ನಾಲ್ಕು ತಂಡಗಳನ್ನು ‘ಸಂಹಾರ’ಕ್ಕಾಗಿ ನಿಯೋಜಿಸಲಾಗಿದ್ದು, ಆರೋಗ್ಯ ಇಲಾಖೆಯ ಕಣ್ಗಾವಲಿನಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲಾ ತಂಡಗಳಿಗೂ ರೋಗ ನಿರೋಧಕ ಔಷಧಗಳು, ಪಿಪಿಇ ಕಿಟ್, ಮಾಸ್ಕ್‌ಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!