ಅಲ್ನೋಡಿ ಭಾರತ ಸೂಪರ್‌ ಪವರ್‌ ಆಗ್ತಿವೆ, ನಾವು ಭಿಕ್ಷೆ ಬೇಡ್ತಿದ್ದೇವೆ: ಪಾಕ್‌ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಸೂಪರ್ ಪವರ್ ಆಗಲು ಕನಸು ಕಾಣುತ್ತಿದೆ, ನಾವು ದಿವಾಳಿಯಾಗುವುದನ್ನು ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಆಡಳಿತವನ್ನು ಕುಟುಕಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಇಂದು ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿದರೆ ನಿಜಾಂಶ ಅರಿವಾಗುತ್ತದೆ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ದೊರೆತಿರುವುದು ಒಂದೇ ದಿನ. ಆದರೆ ಇಂದು ಭಾರತ ಸೂಪರ್ ಪವರ್ ಆಗುವತ್ತ ದಾಪುಗಾಲಿಡುತ್ತಿದೆ. ನಾವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದೇವೆ.

ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡ ಪಾಕಿಸ್ಥಾನ ಇಂದು ಜಾತ್ಯತೀತ ರಾಜ್ಯವಾಗಿದೆ. 1973 ರಿಂದ ಸಿಐಐನ ಒಂದೇ ಒಂದು ಶಿಫಾರಸ್ಸನ್ನೂ ಜಾರಿಗೆ ತರಲಾಗಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!