Wednesday, October 5, 2022

Latest Posts

ಟೀಮ್‌ ಡೇವಿಡ್‌ VS ಬೂಮ್ರಾ.. ಕೊಹ್ಲಿ VS ಹೆಜಲ್ವುಡ್‌: ರೋಚಕವಾಗಿರಲಿದೆ ಇಂಡೋ- ಆಸಿಸ್‌ ಹಣಾಹಣಿ; ಹೀಗಿರಲಿದೆ ಪ್ಲೇಯಿಂಗ್‌ XI

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯು ಮಂಗಳವಾರದಿಂದ ಶುರುವಾಗಲಿದೆ. ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಈ ಸರಣಿಯು ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಅಗತ್ಯ ಸಿದ್ಧತೆ ನಡೆಸಲು ಹಾಗೂ  ಪ್ಲೇಯಿಂಗ್‌ 11 ಅನ್ನು ನಿರ್ಧರಿಸಲು ಉಭಯ ತಂಡಗಳಿಗೆ ಅಂತಿಮ ಕೆಲವು ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದಲೇ ಭಾರತವು ಸರಣಿಯಲ್ಲಿ ತನ್ನ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಗೆ ಭಾರತ ತಂಡ ದೊಡ್ಡ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರ ಪುನರಾಗಮನದೊಂದಿಗೆ ಭಾರತವು ತನ್ನ ಅತ್ಯುತ್ತಮ XI ಜೊತೆಗೆ ಆಡುವ ನಿರೀಕ್ಷೆಯಿದೆ. ಬುಮ್ರಾ ಮತ್ತು ಹರ್ಷಲ್ ಇಬ್ಬರೂ ತಮ್ಮ ಗಾಯಗಳಿಂದ ಚೇತರಿಸಿಕೊಂಡ ನಂತರ ಸರಣಿಗೆ ಬರುತ್ತಿದ್ದಾರೆ. ಕಳಪೆ ಫಾರ್ಮ್‌ ನಲ್ಲಿರುವ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮುಂಬರುವ ಪಂದ್ಯಗಳಲ್ಲಿ ಹೇಗೆ ಆಡಲಿದ್ದಾರೆ ಎಂಬುದು ಪ್ರಮುಖವಾಗಿದೆ. ಏಕೆಂದರೆ ವಿಶ್ವಕಪ್‌ ನಂತಹ ಮಹತ್ವದ ಟೂರ್ನಿಯಲ್ಲಿ ಅವರ ಅವರ ಫಾರ್ಮ್ ಪ್ರಮುಖವಾಗಿದೆ. ಅವರೊಂದಿಗೆ ಕೆ.ಎಲ್‌ ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್, ಆರನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಸ್ಥಾನಗಳು ಫಿಕ್ಸ್‌ ಆಗಿವೆ.
ಆದರೆ ಆರನೇ ಕ್ರಮಾಂಕದಲ್ಲಿ ಮತ್ತೆ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ನಡುವಿನ ಆಯ್ಕೆ ಸಮಸ್ಯೆ ಎದುರಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ರಿಷಭ್‌ಗೆ ಹಲವು ಅವಕಾಶ ನೀಡಲಾಗಿತ್ತು. ಈ ಸರಣಿಯಲ್ಲೂ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿ ಪಂತ್ ಆಗಿರಲಿದ್ದು, ಅವರು ವಿಫಲವಾದರೆ ಆಫ್ರಿಕಾ  ಸರಣಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಪರಿಗಣಿಸಬಹುದು.
ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಗೆ ತೆರಳಿರುವ ಅರ್ಶ್ದೀಪ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಅವರು ಸೆ. 28 ರಂದು ಪ್ರಾರಂಭವಾಗುವ ಸೌತ್‌ ಆಫ್ರಿಕಾ ಸರಣಿಗೆ ಮರಳಲಿದ್ದಾರೆ.
ದೀಪಕ್ ಚಹಾರ್ ಮತ್ತು ಭುವನೇಶ್ವರ್ ಕುಮಾರ್ ನಡುವೆಯೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅವರಿಬ್ಬರೂ ಒಂದೇ ರೀತಿಯ ಕೌಶಲ್ಯವನ್ನು ಹೊಂದಿರುವುದರಿಂದ ಇಬ್ಬರಲ್ಲಿ ಒಬ್ಬರು ಪ್ಲೇಯೀಂಗ್‌ 11 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ರಿಪ್ಲೇಸ್‌ ಆಗಲಿದ್ದಾರೆ. ಮತ್ತೊಬ್ಬ ಸ್ಪಿನ್ನರ್‌ ಆಗಿ ಯಜ್ವೆಂದ್ರ ಚಾಹಲ್‌ ಕಾಣಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯದ ತಂಡದಲ್ಲಿ ಹಲವಾರು ಬದಲಾವಣೆಗಳಾಗಿವೆ. ಅವರು ಡೇವಿಡ್ ವಾರ್ನರ್ ಮತ್ತು ಮಿಚೆಲ್‌  ಸ್ಟಾರ್ಕ್ ಹಾಗೂ ಮಿಚೆಲ್‌ ಮಾರ್ಷ್ ಗಾಯದ ಕಾರಣದಿಂದ ತಂಡದಿಂದ ಹೊರಬಿದ್ದಿದ್ದಾರೆ. ಸ್ಫೋಟಕ ಆಟಗಾರರಾದ ಟಿಮ್ ಡೇವಿಡ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಿದರೆ ಭಾರತೀಯ ಬೌಲರ್‌ ಗಳಿಗೆ ಕಷ್ಟವಾಗಲಿದೆ. ಐಪಿಎಲ್‌ ನಲ್ಲಿ ಮುಂಬೈ ಪ್ರತಿನಿಧಿಸುವ ಡೇವಿಡ್‌ ಆಸಿಸ್‌ ವಿಶ್ವಕಪ್‌ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಜೋಶ್ ಇಂಗ್ಲಿಸ್, ನಾಥನ್ ಎಲ್ಲಿಸ್ ಕೆಲವು ಹೊಸ ಮುಖಗಳಾಗಿದ್ದು, ಸರಣಿಯಲ್ಲಿ ಮಿಂಚಲು ಉತ್ಸುಕರಾಗಿದ್ದಾರೆ.

ಟೀಂ ಇಂಡಿಯಾ ಸಂಭಾವ್ಯ 11:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್/ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಾಹರ್/ಭುವನೇಶ್ವರ್ ಕುಮಾರ್

ಆಸ್ಟ್ರೇಲಿಯಾ ಸಂಭಾವ್ಯ 11:
ಆರನ್ ಫಿಂಚ್, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಟಿಮ್ ಡೇವಿಡ್, ಆಡಮ್ ಝಂಪಾ, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಆಶ್ಟನ್ ಅಗರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!