ಇಂದು ವಿಶ್ವಕಪ್‌ ಫೈನಲ್‌ ಫೈಟ್:‌ ಅಹಮದಾಬಾದ್‌ನಲ್ಲಿ ಭಾರತ v/s ಆಸ್ಟ್ರೇಲಿಯಾ ಮುಖಾಮುಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಏಕದಿನ ವಿಶ್ವಕಪ್ ಗ್ರ್ಯಾಂಡ್ ಫಿನಾಲೆ ಆರಂಭವಾಗಲಿದೆ. ಅಹಮದಾಬಾದ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂತಿಮ ಹೋರಾಟದಲ್ಲಿ ಮುಖಾಮುಖಿಯಾಗಲಿವೆ. ಬಿಗ್ ಸಂಡೆ, ಬಿಗ್ ಫೈಟ್ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವಾಗಿದ್ದು, ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ದೀಪಗಳಿಂದ ಬೆಳಗುತ್ತಿದೆ.

ಇಡೀ ಕ್ರಿಕೆಟ್ ಜಗತ್ತು ಈಗ ಗುಜರಾತ್‌ ಕಡೆಗೆ ಹೆಜ್ಜೆಯಿಟ್ಟಿದ್ದು, ಅಹಮದಾಬಾದ್ ಕ್ರಿಕೆಟ್ ಅಭಿಮಾನಿಗಳಿಗೆ ವರ್ಣರಂಜಿತ ಸ್ವಾಗತ ನೀಡಿದೆ. 2003 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕೊನೆಯ ಬಾರಿಗೆ ODI ವಿಶ್ವಕಪ್ ಫೈನಲ್‌ನಲ್ಲಿ ಸ್ಪರ್ಧಿಸಿ ಸುಮಾರು ಎರಡು ದಶಕಗಳು ಕಳೆದಿವೆ. ಆ ವೇಳೆ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಕಪ್ ಗೆದ್ದಿತ್ತು. ಇದೀಗ ಭಾರತ ತಂಡದ ಸರದಿ ಆಸ್ಟ್ರೇಲಿಯಾವನ್ನು ಸೋಲಿಸಿ ಕಪ್‌ ಗೆಲ್ಲುವ ಸಮಯ ಹತ್ತಿರದಲ್ಲಿದೆ.

ಇದುವರೆಗೆ 8 ಬಾರಿ ವಿಶ್ವಕಪ್ ಫೈನಲ್ ತಲುಪಿರುವ ಆಸೀಸ್ ಐದು ಬಾರಿ ಗೆದ್ದಿದೆ. ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿತ್ತು. ಭಾರತ ಈ ಬಾರಿ ಮೂರನೇ ಬಾರಿ ವಿಶ್ವಕಪ್‌ಗೆ ಮುತ್ತಿಕ್ಕುವ ಸಮಯ ಬಂದಿದೆ. ಕಾಂಗರೂಗಳೊಂದಿಗೆ ಖತರ್ನಾಕ್ ಯುದ್ಧಕ್ಕೆ ರೋಹಿತ್ ಸೇನೆ ಸಜ್ಜಾಗಿದೆ.

ಭಾರತ ಇದುವರೆಗೆ ಆಡಿದ ಹತ್ತು ಪಂದ್ಯಗಳನ್ನು ಗೆದ್ದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕೂಡ ಭಾರತಕ್ಕೆ ಪ್ಲಸ್ ಆಗಿದೆ. ರೋಹಿತ್, ಗಿಲ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್ ಫಾರ್ಮ್‌ಗೆ ಮರಳಿದ್ದು ಮಾತ್ರವಲ್ಲದೆ ಇದುವರೆಗಿನ ಪಂದ್ಯಗಳಲ್ಲಿ ಮಿಂಚಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!