ಮಾರಕ ವೇಗಿ ಬೂಮ್ರಾಗೆ ಏಕದಿನದಲ್ಲಿ ನಂ.1 ‌ಬೌಲರ್ ಪಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೆನ್ನಿಂಗ್‌ಟನ್ ಓವಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಕ್ಷರಶಃ ಬಿರುಗಾಳಿಯಂತೆ ಅಬ್ಬರಿಸಿ ಇಂಗ್ಲಿಷ್‌ ಪಡೆಯ ಬ್ಯಾಂಟಿಂಗ್‌ ವಿಭಾಗವನ್ನು ಧೂಳೀಪಟ ಮಾಡಿದ ಭಾರತ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಇಂಗ್ಲೆಂಡ್‌ ವಿರುದ್ಧ ಆರ್ಭಟಿಸಿದ್ದ ಬೂಮ್ರಾ ಕೇವಲ 19 ರನ್‌ ಗಳಿಗೆ 6 ವಿಕೆಟ್‌ ಕಬಳಿಸಿ ತಾನೆಂತಹ ಘಾತಕ ವೇಗಿ ಎಂಬುದನ್ನು ತೋರಿಸಿಕೊಟ್ಟಿದ್ದರು. ಈ ಹಿಂದೆ ಎರಡು ಬಾರಿ ನಂ. 1 ಬೌಲರ್‌ ಆಗಿದ್ದ ಆಗಿದ್ದ ಬುಮ್ರಾ ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ಗೆ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಓವೆಲ್‌ ಪಂದ್ಯಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ಬೂಮ್ರಾ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ.
ಬೂಮ್ರಾ ಕಪಿಲ್ ದೇವ್ ನಂತರ ಏಕದಿನ ಶ್ರೇಯಾಂಕದಲ್ಲಿ ನಂ. 1 ಆಗಿರುವ ಎರಡನೇ ಭಾರತೀಯ ವೇಗಿ. ಸ್ಪಿನ್ನ ರ್‌ ಗಳು ಸೇರಿದರೆ   ಮಣಿಂದರ್ ಸಿಂಗ್, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕ ಪಡೆದ ಸಾಧನೆ ಮಾಡಿದ್ದಾರೆ.
ಬುಮ್ರಾ ಅವರ ನ್ಯೂ ಬಾಲ್ ಜೊತೆಗಾರ ಮೊಹಮ್ಮದ್ ಶಮಿ ಕೂಡ 3/31 ವಿಕೆಟ್‌ ಗಳಿಕೆ ಸಾಧನೆ ಮಾಡುವ ಮೂಲಕ ಆಂಗ್ಲರ ತಂಡವನ್ನು 25.2 ಓವರ್‌ಗಳಲ್ಲಿ 110 ಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಪಂದ್ಯದ ಬಳಿಕ ಶಮಿ ಮೂರು ಸ್ಥಾನಗಳಲ್ಲಿ ಪ್ರಗತಿ ಸಾಧಿಸಿದ್ದು, ತಂಡದ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರೊಂದಿಗೆ ಜಂಟಿ 23 ನೇ ಸ್ಥಾನಕ್ಕೆ ತಲುಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!