TREADING | ಬಾಲಕಿಗೆ ಒಲಿದ ಅದೃಷ್ಟ: 100 ಲಾಟರಿ ಟಿಕೆಟ್​ಗೆ ಬಂತು 10 ಲಕ್ಷ ಬಂಪರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಂಜಾಬ್​ನ ಅಮೃತಸರದ ಬಾಲಕಿ ಖರೀದಿಸಿದ 100 ರೂಪಾಯಿ ಲಾಟರಿ ಟಿಕೆಟ್​ಗೆ 10 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಅಮೃತಸರದ ಬಾಬಾ ಬಕಲಾ ಸಾಹಿಬ್‌ನ ನಿವಾಸಿ ಹರ್‌ಸಿಮ್ರಾನ್ ಕೌರ್ ಎಂಬ ಬಾಲಕಿಯೇ ಆ ಅದೃಷ್ಟವಂತೆ.
ಹರ್​ಸಿಮ್ರಾನ್​ ಕೌರ್​ ಅವರ ತಂದೆ ಜಮಾಲ್ ಸಿಂಗ್, ಬಾಬಾಬಕಲಾ ಸಾಹಿಬ್​ನ ರಸ್ತೆ ಬದಿ ಚಿಕ್ಕ ಅಂಗಡಿಯನ್ನು ನಡೆಸುತ್ತಿದ್ದಾರೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತಂದೆಗೆ ನೆರವಾಗಲೆಂದು ಹರ್​ಸಿಮ್ರಾನ್​ ಅಂಗಡಿ ಬಂದಿದ್ದರು.
ಈ ವೇಳೆ ಲಾಟರಿ ಮಾರಾಟ ಮಾಡುವ ವ್ಯಕ್ತಿ ಬಂದು ಲಾಟರಿ ಟಿಕೆಟ್​ ಖರೀದಿಸಲು ಕೇಳಿದ್ದಾರೆ.
ಈ ವೇಳೆ ಹರ್​ಸಿಮ್ರಾನ್​ ಕೌರ್​ ಅವರ ತಂದೆ ನಿರಾಕರಿಸಿದ್ದಾರೆ. ಬಳಿಕ ಸಿಮ್ರಾನ್​ ಒತ್ತಾಯ ಮಾಡಿ 100 ರೂಪಾಯಿ ಲಾಟರಿ ಟಿಕೆಟ್​ ಖರೀದಿಸುವಂತೆ ಮಾಡಿದ್ದಾರೆ. ಬಳಿಕ ಟಿಕೆಟ್​ ಹರಿದು ನೋಡಿದಾಗ ಅದರಲ್ಲಿ 10 ಲಕ್ಷ ರೂಪಾಯಿ ಬಹುಮಾನ ಬಂದಿರುವುದು ಗೊತ್ತಾಗಿದೆ.
ಇನ್ನು ಲಾಟರಿಯಲ್ಲಿ 10 ಲಕ್ಷ ರೂಪಾಯಿ ಬಂದಿದ್ದಕ್ಕೆ ಹರ್​​ಸಿಮ್ರಾನ್​ ಕೌರ್​ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದೆ. ಈ ಹಣವನ್ನು ತನ್ನ ತಂದೆಯ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತನ್ನ ಓದಿಗೆ ಬಳಕೆ ಮಾಡಿಕೊಳ್ಳುವುದಾಗಿ ಸಿಮ್ರಾನ್​ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!