ಇಂದು ಇಂಡಿಯಾ- ಐರ್ಲೆಂಡ್‌ ಟಿ20 ವಾರ್‌: ಕ್ಯಾಪ್ಟನ್‌ ಹಾರ್ದಿಕ್‌ ಗೆ ಹೊಸ ಚಾಲೆಂಜ್; ಸಂಭಾವ್ಯ ಪ್ಲೇಯಿಂಗ್‌ XI ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಪ್ರವಾಸಿ ದಕ್ಷಿಣ ಆಫ್ರಿಕಾದ ವಿರುದ್ಧ ಸರಣಿ ಸಮಬಲ ಮಾಡಿಕೊಂಡ ಬಳಿಕ ಭಾರತವು ಇದೀಗ ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ.
ಜೂನ್ 26 (ಇಂದು) ರಂದು ಡಬ್ಲಿನ್‌ ನ ಮಲಾಹೈಡ್ ಕ್ರಿಕೆಟ್ ಗ್ರೌಂಡ್ ನಲ್ಲಿ ಮೊದಲ ಟಿ20 ಪಂದ್ಯ ಜರುಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9:00 ಕ್ಕೆ ಪ್ರಾರಂಭವಾಗಲಿದೆ. ರೋಹಿತ್‌ ಶರ್ಮಾ ನೇತೃತ್ವದ ಬಲಿಷ್ಠ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿರುವುದರಿಂದ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಭಾರತ ತಂಡದ ಕ್ಯಾಪ್ಟನ್‌ ಟೋಪಿಯನ್ನು ಧರಿಸಿದ್ದಾರೆ. ಚೊಚ್ಚಲ ಋತುವಿನಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿರಿಸಿರುವ ಹಾರ್ದಿಕ್‌ ಬಹುತೇಕ ಹೊಸ ಮುಖಗಳೇ ತುಂಬಿರುವ ತಂಡವನ್ನು ಮುನ್ನಡೆಸಲಿದ್ದಾರೆ.
ವಿವಿಎಸ್‌ ಲಕ್ಷ್ಮಣ್‌ ಕೋಚಿಂಗ್‌ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐಪಿಎಲ್‌ ನಲ್ಲಿ ಮಿಂಚಿದ ಆಟಗಾರರು ತಂಡದಲ್ಲಿದ್ದು ಸೂರ್ಯಕುಮಾರ್ ಯಾದವ್ ತಂಡಕ್ಕೆ ಹಿಂತಿರುವುದು ಹಾಗೂ ರಾಹುಲ್ ತ್ರಿಪಾಠಿ ಅವರಂತಹ ಪ್ರಭಾವಶಾಲಿ ಆಟಗಾರ ತಂಡದಲ್ಲಿರುವುದು ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾಣೆಗಳನ್ನು ಕಾಣುವ ನಿರೀಕ್ಷೆ ಮೂಡಿಸಿದೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಭಾರತಕ್ಕೆ ಪ್ರಮುಖ ಆಟಗಾರರಾಗಿದ್ದಾರೆ. ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಆಟವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲೀಕ್‌ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.
ಮತ್ತೊಂದೆಡೆ ಐರ್ಲೆಂಡ್‌ ತಂಡ ಅನುಭವಿಗಳ ಜೊತೆಗೆ ಯುವ ಆಟಗಾರನ್ನು ಹೊಂದಿದ್ದು ಸಮತೋಲಿತ ತಂಡವಾಗಿ ಕಾಣುತ್ತಿದೆ. ಸ್ಪೋಟಕ ಆಟಗಾರ್ ಪಾಲ್ ಸ್ಟಿರ್ಲಿಂಗ್, ನಾಯಕ ಆಂಡಿ ಬಾಲ್ಬಿರ್ನಿ ಅವರಂತಹ ಖ್ಯಾತನಾಮ ಆಟಗಾರರ ಜೊತೆಗೆ ಗರೆಥ್ ಡೆಲಾನಿ ಮತ್ತು ಕರ್ಟಿಸ್ ಕ್ಯಾಂಫರ್ ಮೊದಲಾದ ಯುವ ಆಟಗಾರರು ಭಾರತದ ಎದುರು ಮಿಂಚಲು ಕಾಯುತ್ತಿದ್ದಾರೆ.
ಐರ್ಲೆಂಡ್ ವಿರುದ್ಧ ಹೆಡ್-ಟು-ಹೆಡ್ ಮುಖಾಮುಖಿಯಲ್ಲಿ ಭಾರತವು ಸ್ಪಷ್ಟವಾಗಿ ಪ್ರಾಬಲ್ಯ ಹೊಂದಿದೆ. ಭಾರತ ಇದುವರೆಗೆ ಐರ್ಲೆಂಡ್ ವಿರುದ್ಧ ಆಡಿದ ಎಲ್ಲಾ ಮೂರು ಟಿ20 ಪಂದ್ಯಗಳನ್ನು ಗೆದ್ದಿದೆ. ಪಂದ್ಯ ರಾತ್ರಿ 09ಕ್ಕೆ ಪ್ರಾರಂಭವಾಗಲಿದೆ. ರಾತ್ರಿ 08:30ಕ್ಕೆ ಟಾಸ್ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಅಭಿಮಾನಿಗಳು ಭಾರತ ಮತ್ತು ಐರ್ಲೆಂಡ್ ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದು.

ಐರ್ಲೆಂಡ್‌ ಸಂಭಾವ್ಯ ಪ್ಲೇಯಿಂಗ್‌ XI:
ಪಾಲ್ ಸ್ಟಿರ್ಲಿಂಗ್, ಆಂಡಿ ಬಾಲ್ಬಿರ್ನಿ (ಸಿ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಾಕ್), ಸ್ಟೀಫನ್ ಡೊಹೆನಿ, ಆಂಡಿ ಮೆಕ್‌ಬರ್ನಿ, ಕರ್ಟಿಸ್ ಕ್ಯಾಂಫರ್, ಮಾರ್ಕ್ ಅಡೇರ್, ಬ್ಯಾರಿ ಮೆಕ್‌ಕಾರ್ಥಿ, ಜೋಶ್ ಲಿಟಲ್

IND ಆಡುವ XI:
ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್/ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಸಿ), ದಿನೇಶ್ ಕಾರ್ತಿಕ್ (ವಿಕೆ), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್/ಅರ್ಶ್ದೀಪ್ ಸಿಂಗ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!