ಟಾಲಿವುಡ್‌ ನಟಿಯ ರೋಡ್‌ ಸೈಡ್‌ ಡಾನ್ಸ್‌, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೃಷ್ಣಗಾಡಿ ವೀರ ಪ್ರೇಮಗಾಧ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ಮೆಹ್ರೀನ್‌ ತಾಜ್ ನಂತರ ತೆಲುಗು, ಹಿಂದಿ, ತಮಿಳು ಮತ್ತು ಪಂಜಾಬಿಯಲ್ಲಿ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಎಫ್-‌2 ಹನಿ ಈಸ್‌ ದ ಬೆಸ್ಟ್‌, ಎಫ್-3 ಹನಿ ಈಸ್ ರಿಚ್ ಎಂಬ ಡೈಲಾಗ್‌ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೆಹ್ರೀನ್‌ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಡು ರಸ್ತೆಯಲ್ಲಿ ಒಬ್ಬ ನಾಯಕಿ ಹೀಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿದ್ದ ಮೆಹ್ರೀನ್‌ ಮದುವೆಯ  ಮೆರವಣಿಗೆಯ ಭಾಗವಾಗಿ ಮತ್ತೊಬ್ಬ ಸ್ನೇಹಿತೆಯೊಂದಿಗೆ ನೃತ್ಯ ಮಾಡಿದ್ದಾರೆ.

‘ಪಂಜಾಬಿ ಮದುವೆಯ ದೃಶ್ಯಗಳು’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ನೀಡಲಾಗಿದೆ. ಮೆಹ್ರೀನ್ ಡ್ಯಾನ್ಸ್ ನೋಡಿದ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!