ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಾರ್ಚ್ 9 ರಂದು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡ ಮುಖಾಮುಖಿಯಾಗಲಿದೆ.
ಉಭಯ ತಂಡಗಳು ಐಸಿಸಿ ಟೂರ್ನಿಯಲ್ಲಿ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡೂ ಫೈನಲ್ಗಳಲ್ಲೂ ನ್ಯೂಝಿಲೆಂಡ್ ಪಡೆ ಭಾರತದ ವಿರುದ್ಧ ಜಯ ಸಾಧಿಸಿತ್ತು.
ಇದೀಗ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಲಿದೆಯಾ ಅಥವಾ ನ್ಯೂಝಿಲೆಂಡ್ ಹ್ಯಾಟ್ರಿಕ್ ಜಯ ಸಾಧಿಸಲಿದೆಯಾ ಕಾದು ನೋಡಬೇಕಿದೆ.