ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಹಿತಾಸಕ್ತಿಗಳನ್ನು ಗೌರವಿಸುವ ಮತ್ತು ಸೂಕ್ಷ್ಮತೆಗಳನ್ನು ಗುರುತಿಸುವ ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ದೆಹಲಿ ಬಯಸುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
“ಸ್ಥಿರ ಸಮತೋಲನವನ್ನು ಹೇಗೆ ಸೃಷ್ಟಿಸುವುದು ಮತ್ತು ಸಮತೋಲನದ ಮುಂದಿನ ಹಂತಕ್ಕೆ ಪರಿವರ್ತನೆಗೊಳ್ಳುವುದು ಪ್ರಮುಖ ವಿಷಯವಾಗಿದೆ. ನಮ್ಮ ಹಿತಾಸಕ್ತಿಗಳನ್ನು ಗೌರವಿಸುವ, ನಮ್ಮ ಸೂಕ್ಷ್ಮತೆಗಳನ್ನು ಗುರುತಿಸುವ ಸ್ಥಿರ ಸಂಬಂಧವನ್ನು ನಾವು ಬಯಸುತ್ತೇವೆ. ಅದು ನಿಜವಾಗಿಯೂ ನಮ್ಮ ಸಂಬಂಧದಲ್ಲಿ ಪ್ರಮುಖ ಸವಾಲು,” ಎಂದು ಜೈಶಂಕರ್ ಭಾರತ-ಚೀನಾ ಸಂಬಂಧದ ಕುರಿತು ತಿಳಿಸಿದ್ದಾರೆ.
“ಗಡಿ ಅಸ್ಥಿರವಾಗಿದ್ದರೆ, ಶಾಂತಿಯುತವಾಗಿಲ್ಲದಿದ್ದರೆ, ಅದು ಅನಿವಾರ್ಯವಾಗಿ ನಮ್ಮ ಸಂಬಂಧದ ಬೆಳವಣಿಗೆ ಮತ್ತು ದಿಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ಶಾಂತಿ, ನೆಮ್ಮದಿ ಅತ್ಯಗತ್ಯ” ಎಂದು ಹೇಳಿದ್ದಾರೆ.