August 10, 2026
Monday, August 10, 2026
spot_img

IND vs ZIM: ಸರಣಿ ವಶಕ್ಕೆ ಟೀಮ್ ಇಂಡಿಯಾ ರೆಡಿ; ಅಯ್ಯರ್‌ಗೆ ಚೊಚ್ಚಲ ಟ್ರೋಫಿ ಗೆಲ್ಲುವ ಸುವರ್ಣ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಬಾರಿಸಿರುವ ಭಾರತ ಕ್ರಿಕೆಟ್ ತಂಡ, ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್ ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾಗೆ ಇದು ಮೊದಲ ಟಿ20 ಸರಣಿ ಗೆಲುವಾಗಲಿದ್ದು, ತಂಡವು ಪೂರ್ಣ ಆತ್ಮವಿಶ್ವಾಸದಲ್ಲಿದೆ. ಮತ್ತೊಂದೆಡೆ, ಸರಣಿಯಲ್ಲಿ ಜೀವಂತವಾಗಿರಲು ಜಿಂಬಾಬ್ವೆಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ಪಂದ್ಯದ ದಿನಾಂಕ, ಸಮಯ ಹಾಗೂ ಮೈದಾನ

  • ದಿನಾಂಕ: ಜುಲೈ 25, ಶನಿವಾರ.
  • ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್ (Harare Sports Club).
  • ಸಮಯ: ಪಂದ್ಯವು ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಆರಂಭವಾಗಲಿದ್ದು, ಸಂಜೆ 4:00 ಗಂಟೆಗೆ ಟಾಸ್ ನಡೆಯಲಿದೆ.

ಲೈವ್ ಪ್ರಸಾರ ವೀಕ್ಷಿಸುವುದು ಹೇಗೆ?

ಟಿವಿ ವೀಕ್ಷಕರು Unite8 Sports ಚಾನೆಲ್‌ನಲ್ಲಿ ಈ ಪಂದ್ಯವನ್ನು ನೇರವಾಗಿ ವೀಕ್ಷಿಸಬಹುದು. ಮೊಬೈಲ್ ಹಾಗೂ ಓಟಿಟಿ ಬಳಕೆದಾರರು FanCode ಆಪ್ ಮೂಲಕ ಲೈವ್ ಸ್ಟ್ರೀಮಿಂಗ್ ಆನಂದಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !