ಮೈಸೂರು ಅರಮನೆ ಆವರಣದಲ್ಲಿ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರ ನಿರ್ಮಾಣಕ್ಕೆ ಪೂರಕವಾದ ರೀತಿಯ ಆಡಳಿತ ನೀಡುತ್ತೇವೆ ಎಂದ ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಮೈಸೂರು:

ರಾಷ್ಟ್ರ ನಿರ್ಮಾಣಕ್ಕೆ ಪೂರಕವಾದ ರೀತಿಯ ಆಡಳಿತ ನೀಡುತ್ತೇವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ವರ್ಚುವಲ್ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ರಾಜ್ಯದ 1.20 ಕೋಟಿ ಮನೆಗಳಲ್ಲಿ ತಿರಂಗ ಹಾರಿಸಲಾಗಿದೆ. ಸ್ವಾತಂತ್ರ್ಯ ಮಹೋತ್ಸವವನ್ನು ಸಂಭ್ರಮದಿoದ ಆಚರಿಸಲಾಗುತ್ತಿದೆ. ಇತ್ತೀಚೆಗೆ ಮೈಸೂರಿಗೆ ಬಂದಾಗ ಯುವಕರ ಉತ್ಸಾಹ ನೋಡಿ ಪ್ರೇರಣೆ ಪಡೆದುಕೊಂಡಿದ್ದೇನೆ. ಮುಂದಿನ 25 ವರ್ಷಕ್ಕೆ ಭದ್ರ ಬುನಾದಿ ಹಾಕಬೇಕು.
ಅರಮನೆ ಆಡಳಿತ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮಗಳು: ಅಂತರಾಷ್ಟ್ರೀಯ ಕಲಾವಿದ, ಆಪ್ತಮಿತ್ರ ಚಿತ್ರದ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್ ಮತ್ತು ತಂಡದಿoದ ರಾತ್ರಿ 8 ಗಂಟೆ ಯಿಂದ 9 ಗಂಟೆಯ ವರೆಗೆ ನೃತ್ಯ ರೂಪಕ ಸೈನಿಕ ಕಾರ್ಯಕ್ರಮ. ರಾತ್ರಿ 9:15 ರಿಂದ 11:15ರ ವರೆಗೆ ಖ್ಯಾತ ಹಿನ್ನಲೆ ಗಾಯಕರಾದ ಅಜಯ್ ವಾರಿಯರ್ ಅಂಕಿತ ಕುಂಡು, ಶಶಿಕಲಾ ಸುನೀಲ್, ನಾಗಚಂದ್ರಿಕಾ ಭಟ್, ರವಿ ಮುರೂರು, ಚಿಂತನ ವಿಕಾಸ್ ಮತ್ತು ತಂಡದವರಿoದ ವಂದೇ ಮಾತರಂ- ಸಂಗೀತ ಕಾರ್ಯಕ್ರಮ. ರಾತ್ರಿ 11:30 ರಿಂದ 12ಗಂಟೆಯ ವರೆಗೆ ಲೇಸರ್ವಿಷನ್ ರವರಿಂದ ಲೇಸರ್ ಶೋ ಕಾರ್ಯಕ್ರಮ ನಡೆಯಿತು
ಅರಮನೆ ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಿನ್ನಲೇಯಲ್ಲಿ ದೀಪಾಲಂಕಾರದಿoದ ಮೈಸೂರು ಅರಮನೆ ಜಗಮಗಿಸಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್ ಹಾಗೂ ಇನ್ನಿತರರ ಬಿಜೆಪಿ ಮುಖಂಡರು ಆಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here