Sunday, September 25, 2022

Latest Posts

ಸ್ವಾತಂತ್ರ್ಯ ಸಂಭ್ರಮ: ದೇಶವನ್ನುದ್ದೇಶಿ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ತ್ಯಾಗ ಬಲಿದಾನ, ಇಂದಿನ ಭಾರತದ ಸಾಧನೆ ಕುರಿತು ದ್ರೌಪದಿ ಮುರ್ಮು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ಹೆಣ್ಣುಮಕ್ಕಳು ನಮ್ಮ ರಾಷ್ಟ್ರದ ದೊಡ್ಡ ಭರವಸೆ. ದೇಶದ ಬಗ್ಗೆ ನಮ್ಮ ಹೆಣ್ಣುಮಕ್ಕಳು ದೊಡ್ಡ ಭರವಸೆ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ನಾವು ವಸಾಹತುಶಾಹಿ ಆಡಳಿತಗಾರರ ಸಂಕೋಲೆಯಿಂದ ಮುಕ್ತವಾಗಲು ಅಗಾಧ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಿದರು.ನಾವು ಸ್ವತಂತ್ರ ಭಾರತದಲ್ಲಿ ಬದುಕಲು ಸಾಧ್ಯವಾಗುವಂತೆ ಅಪಾರ ತ್ಯಾಗ ಮಾಡಿದವರಿಗೆ ನಾವು ನಮಸ್ಕರಿಸುತ್ತೇವೆ. ಇತರ ಸುಸ್ಥಾಪಿತ ಪ್ರಜಾಪ್ರಭುತ್ವಗಳಲ್ಲಿ ಮಹಿಳೆಯರು ಮತದಾನದ ಹಕ್ಕನ್ನು ಪಡೆಯಲು ದೀರ್ಘಾವಧಿಯ ಹೋರಾಟಗಳನ್ನು ನಡೆಸಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ತಿಳಿಸಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ದೊಡ್ಡ ಭರವಸೆ ಎಂದು ಅವರು ಪ್ರತಿಪಾದಿಸಿದರು.

ಹಲವು ವೀರರು ಮತ್ತು ಅವರ ಹೋರಾಟಗಳನ್ನು ವಿಶೇಷವಾಗಿ ರೈತರು ಮತ್ತು ಬುಡಕಟ್ಟು ಜನಾಂಗದವರು ಮರೆತುಹೋಗಿದ್ದಾರೆ. ನವೆಂಬರ್ 15 ಅನ್ನು “ನಜಾತಿಯ ಗೌರವ್ ದಿವಸ್ ಎಂದು ಆಚರಿಸಲು ಸರ್ಕಾರದ ನಿರ್ಧರಿಸಿದೆ. ನಮ್ಮ ಬುಡಕಟ್ಟು ವೀರರು ಕೇವಲ ಸ್ಥಳೀಯ ಅಥವಾ ಪ್ರಾದೇಶಿಕ ಐಕಾನ್‌ ಗಳಲ್ಲ, ಆದರೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿರುವುದರಿಂದ ಸ್ವಾಗತಾರ್ಹ ಎಂದರು.

ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ನಾವು ನಮ್ಮ ಭಾರತೀಯತೆಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ಕೂಡಿದೆ. ಆದರೆ, ನಾವೆಲ್ಲರೂ ಒಂದೇ ಎಂಬ ಸಾಮಾನ್ಯ ಮನೋಭಾವವಿದೆ. ಈ ಸಾಮಾನ್ಯ ಥ್ರೆಡ್ ನಮ್ಮನ್ನು ಒಟ್ಟಿಗೆ ಬಂಧಿಸುತ್ತದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವದೊಂದಿಗೆ ಒಟ್ಟಾಗಿ ನಡೆಯಲು ಪ್ರೇರೇಪಿಸುತ್ತದೆ ಎಂದರು.
ಈ ವೇಳೆ ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ನವ ಭಾರತ ಲೀಲೆ ಕವನದ ಸಾಲುಗಳನ್ನು ಕನ್ನಡದಲ್ಲೇ ಹೇಳಿದ್ದಾರೆ.ಶ್ರೇಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರೀಕ ತನ್ನ ಕೈಲಾದ ಕೊಡುಗೆ ನೀಡಬೇಕು. ಎಲ್ಲರು ಜೊತೆಗೂಡಿದರೆ ನವಭಾರತ ನಿರ್ಮಾಣವಾಗಲಿದೆ ಎಂದಿದ್ದಾರೆ.

ದ್ರೌಪದಿ ಮುರ್ಮು ಕನ್ನಡದ ಶ್ರೇಷ್ಠ ಹಾಗೂ ರಾಷ್ಟ್ರಕವಿ ಕುವೆಂಪು ಅವರ ನಾನಳಿವೆ ನಿನಳಿವೆ ನಮ್ಮಲವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನವನ್ನು ಕನ್ನಡದಲ್ಲೇ ಉಲ್ಲೇಖಿಸಿದ್ದಾರೆ ಬಳಿಕ ಇದರ ಅರ್ಥವನ್ನು ಹೇಳಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನು ಅಳಿಯುತ್ತೇನೆ, ನೀನು ಅಳಿಸಿ ಹೋಗುತ್ತಿಯಾ. ಆದರೆ ನಾವು ಪಡೆದ ಗೆಲುವು ಹೊಸ ಭಾರತ ನಿರ್ಮಿಸಲಿದೆ. ನಮ್ಮ ಹೋರಾಟದಿಂದ ಭಾರತದ ಅಸ್ಥಿತ್ವ ಇರಲಿದೆ ಎಂದು ಕುವೆಂಪು ಅರ್ಥಪೂರ್ಣವಾಗಿ ನಾನಳಿವೆ ನಿನಳಿವೆ ನಮ್ಮಲವುಗಳ ಮೇಲೆ ಮೂಡುವುದು ಮೂಡುವುದು ನವ ಭಾರತ ಲೀಲೆ ಕವನದಲ್ಲಿ ಹೇಳಿದ್ದಾರೆ. ದೇಶಕ್ಕಾಗಿ ಕೊಡುಗೆ ನೀಡುವುದು, ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಡುವುದು ನಮ್ಮ ಆದರ್ಶವಾಗಬೇಕು ಎಂಬುದನ್ನು ಕುವೆಂಪು ಸೂಚ್ಯವಾಗಿ ಹೇಳಿದ್ದಾರೆ. ಈ ಕುವೆಂಪಪು ಸಾಲಿನ ಅರ್ಥವನ್ನೂ ದ್ರೌಪದಿ ಮುರ್ಮು ತಮ್ಮಭಾಷಣದಲ್ಲಿ ಹೇಳಿದ್ದಾರೆ.

ಭಾರತೀಯ ಯುವ ಸಮೂಹಕ್ಕೆ ಮಹತ್ವದ ಕರೆ ನೀಡಿದ್ದಾರೆ. ಹೊಸ ಭಾರತ ನಿರ್ಮಾಣಕ್ಕೆ ಕೈಜೋಡಿರುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ಭಾರತ ನದಿ, ಬೆಟ್ಟ ಗಡ್ಡ, ಬಯಲು, ಕಾಡು, ಕೃಷಿ ಸೇರಿದಂತೆ ಪ್ರಾಕೃತಿ ಸೌಂದರ್ಯದಿಂದ ಕೂಡಿದ ದೇಶವಾಗಿದೆ. ಈ ಸಂಪತ್‌ಭರಿತ ದೇಶವನ್ನು ಮುಂದಿನ ಪೀಳಿಗೆ ನೀಡುವ ಅತೀ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಭಾರತೀಯ ಕ್ರೀಡಾಪಡುಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗರಿಮೆ ಹೆಚ್ಚಿಸಿದ್ದಾರೆ. ಪದಕಗಳನ್ನು ಗಳಿಸುವ ಮೂಲಕ ಭಾರತದ ಕೀರ್ತಿಯನ್ನು ಪಸರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಸಾಧನೆಯೊಂದಿಗೆ ಮುನ್ನುಗ್ಗುತ್ತಿದೆ. ಇನ್ನು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ಮುನ್ನುಗ್ಗುತ್ತಿದ್ದಾರೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!