ಸ್ವತಂತ್ರ ಸ್ಥಳಾನ್ವೇಷಣೆ, ಕಣ್ಗಾವಲು ಮಿಷನ್ ಯಶಸ್ವಿ: ದಾಖಲೆ ಬರೆದ ಸೇನಾ ಮಹಿಳಾ ಟೀಮ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಬ್ಬೀ ಸಮುದ್ರದಲ್ಲಿ ಸ್ವತಂತ್ರವಾಗಿ ಸ್ಥಳಾನ್ವೇಷಣೆ, ಕಣ್ಗಾವಲು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಐವರು ಮಹಿಳಾ ಅಧಿಕಾರಿಗಳ ತಂಡವು ಹೊಸ ದಾಖಲೆ ಬರೆದಿದೆ.
ಪೈಲೆಟ್‌ಗಳಾದ ಲೆಫ್ಟಿನೆಂಟ್ ಶಿವಾಂಗಿ, ಲೆಫ್ಟಿನೆಂಟ್ ಅಪೂರ್ವ ಗಿತೆ, ಸೆನ್ಸಾರ್ ಅಧಿಕಾರಿ ಲೆಫ್ಟಿನೆಂಟ್ ಪೂಜಾ ಪಾಂಡಾ ಹಾಗೂ ಸಬ್ ಲೆಫ್ಟಿನೆಂಟ್ ಪೂಜಾ ಶೇಖಾವತ್ ಅವರ ತಂಡದ ಈ ಸಾಧನೆಗೆ ನೌಕಾಪಡೆ ಶಹಬ್ಬಾಸ್ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಾಧವಳ್, ಈ ತಂಡಕ್ಕೆ ಒಂದು ತಿಂಗಳ ಅವಧಿಯ ತರಬೇತಿ ನೀಡಲಾಗಿತ್ತು. ಕಾರ್ಯಾಚರಣೆ ಸಂದರ್ಭ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸಲಾಗಿತ್ತು. ಈ ಕಾರ್ಯಾಚರಣೆ ಸ್ತ್ರಿ ಶಕ್ತಿಯನ್ನು ಅನಾವರಣಗೊಳಿಸಿದೆ. ಮಹಿಳಾ ಅಧಿಕಾರಿಗಳೂ ಮಹತ್ವದ ಜವಾಬ್ದಾರಿ ನಿಭಾಯಿಸಬಲ್ಲರು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ಪೋರಬಂದರಿನಲ್ಲಿರುವ ಐಎನ್‌ಎಎಸ್ ೩೧೪ ನೌಕಾ ವಾಯುದಳದ ಈ ಮಹಿಳಾ ತಂಡ, ಡಾರ್ನಿಯರ್ ೨೨೮ ವಿಮಾನದ ಮೂಲಕ ಈ ಸಾಧನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!