ರಫ್ತು ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಿದ ಭಾರತ: USD 418 ಶತಕೋಟಿಗೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತವು ದಿನೇ ದಿನೇ ರಫ್ತು ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು, 2021-22 ರ ಹಣಕಾಸು ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಇಂಜಿನಿಯರಿಂಗ್ ಸರಕುಗಳು, ರತ್ನ ಮತ್ತು ಆಭರಣಗಳು ಮತ್ತು ರಾಸಾಯನಿಕಗಳ ಹೆಚ್ಚಿನ ಸಾಗಣೆಯ ಮೇಲೆ ಭಾರತದ ಸರಕು ರಫ್ತು USD 418 ಶತಕೋಟಿಗೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಮಾರ್ಚ್ 2022 ರಲ್ಲಿ ಒಂದು ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ USD 40 ಶತಕೋಟಿಯಷ್ಟು ರಫ್ತು ಆಗಿದೆ ಎಂದು ಹೇಳಿದರು.
ಆರೋಗ್ಯಕರ ಬೆಳವಣಿಗೆಗೆ ಕೊಡುಗೆ ನೀಡಿದ ಪ್ರಮುಖ ರಫ್ತು ವಲಯಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್, ರತ್ನಗಳು ಮತ್ತು ಆಭರಣಗಳು, ರಾಸಾಯನಿಕಗಳು ಮತ್ತು ಔಷಧೀಯ ವಸ್ತುಗಳು ಈ ವರ್ಷದ ಮಾರ್ಚ್ 23 ರಂದು ಗುರಿಪಡಿಸಿದ USD 400 ಶತಕೋಟಿ ಗಡಿಯನ್ನು ಮೀರಿದೆ.
ಯುಎಸ್, ಯುಎಇ, ಚೀನಾ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಅಗ್ರ ಐದು ರಫ್ತು ತಾಣಗಳಾಗಿವೆ. ಸರಕು ರಫ್ತು ಗುರಿಯನ್ನು ಸಾಧಿಸುವಲ್ಲಿ ದೇಶದ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಭಾರತದ ‘ಆತ್ಮನಿರ್ಭರ್ ಭಾರತ್’ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಿದ್ದಾರೆ.
ಮಾರ್ಚ್ 2021 ರಲ್ಲಿ ರಫ್ತು USD 34 ಬಿಲಿಯನ್ ಆಗಿತ್ತು.FY2020-21 ರಲ್ಲಿ ಮರ್ಚಂಡೈಸ್ ರಫ್ತು USD 292 ಬಿಲಿಯನ್ ಆಗಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!