ಪಂಜಾಬ್​ ಕಿಂಗ್ಸ್​ ವಿರುದ್ಧ ಚೆನ್ನೈ ಟಾಸ್: ಬೌಲಿಂಗ್​ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಪಂಜಾಬ್​ ಕಿಂಗ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.
ಜಡೇಜ ನಾಯಕತ್ವದ ಚೆನ್ನೈ ಎರಡು ಪಂದ್ಯಗಳಲ್ಲಿ ಸೋತಿದೆ. ಮಯಾಂಕ್​ ಮುಂದಾಳತ್ವದ ಪಂಜಾಬ್​ ಕಿಂಗ್ಸ್ ಒಂದು ಗೆಲುವು ಒಂದು ಸೋಲು ಅನುಭವಿಸಿದೆ. ಎರಡೂ ತಂಡಗಳು ಈ ಪಂದ್ಯದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.
ಚೆನ್ನೈ ಸೂಪರ್​ ಕಿಂಗ್​ ತಂಡ ಒಂದು ಬದಲಾವಣೆ ಮಾಡಿದ್ದು, ತುಷಾರ್​ ಬದಲಾಗಿ ಕ್ರಿಸ್ ಜೋರ್ಡಾನ್ ಆಡುತ್ತಿದ್ದಾರೆ. ಪಂಜಾಬ್​ ಕಿಂಗ್ಸ್​ನಲ್ಲಿ ಹರ್ಪ್ರೀತ್ ಬ್ರಾರ್ ಜಾಗಕ್ಕೆ ವೈಭವ್ ಅರೋರಾ ಮತ್ತು ರಾಜ್ ಬಾವಾ ಜಾಗಕ್ಕೆ ಜಿತೇಶ್ ಶರ್ಮಾರನ್ನು ಆಡಿಸುವ ಮೂಲಕ ಎರಡು ಬದಲಾವಣೆ ಮಾಡಿಕೊಂಡಿದೆ.

ಪಂಜಾಬ್​: ಮಯಾಂಕ್ ಅಗರ್ವಾಲ್(ಸಿ), ಶಿಖರ್ ಧವನ್, ಭಾನುಕಾ ರಾಜಪಕ್ಸೆ(ಡಬ್ಲ್ಯೂ), ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಓಡಿಯನ್ ಸ್ಮಿತ್, ಅರ್ಶ್ದೀಪ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ

ಚೆನೈ: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ಸಿ), ಎಂಎಸ್ ಧೋನಿ (ಡಬ್ಲ್ಯು), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!