ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಸೂಪರ್ ಸುತ್ತಿನ ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಎಲ್ ರಾಹುಲ್ ಮಾಡಿದ ಅದೊಂದು ರನೌಟ್ ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿತು. ಈ ಮೂಲಕ ಇಂಡಿಯಾ ಬಾಂಗ್ಲಾ ವಿರುದ್ಧ ಗೆದ್ದು ಸೆಮೀಸ್ ಯತ್ತ ಹೆಜ್ಜೆ ಇಟ್ಟಿದೆ.
ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬಾಂಗ್ಲಾದೇಶದ ಮುಂದೆ 185 ರನ್ಗಳ ಗುರಿಯನ್ನು ನೀಡಿತ್ತು. ಇದಕ್ಕೆ ಉತ್ತರವಾಗಿ, ಲಿಟನ್ ದಾಸ್ ಬಾಂಗ್ಲಾದೇಶಕ್ಕೆ ಆಶ್ಚರ್ಯಕರ ಆರಂಭವನ್ನು ನೀಡಿ, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ಬಾಂಗ್ಲಾ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಆರಂಭಿಸಿದರು. ಈ ವೇಳೆ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಬಳಿಕ ಪಂದ್ಯ ಪ್ರಾರಂಭವಾದಾಗ ಲಿಟನ್ ಅದೇ ಆಕ್ರಮಣಕಾರಿ ಇನ್ನಿಂಗ್ಸ್ ಅನ್ನು ನಿರೀಕ್ಷಿಸಿತ್ತು. ಆದರೆ 8ನೇ ಓವರ್ ಎಸೆದ ಅಶ್ವಿನ್ ಅವರ ಎರಡನೇ ಎಸೆತದಲ್ಲಿ ನಜ್ಮುಲ್ ಶಾಂಟೊ ಅವರು ಅಶ್ವಿನ್ ಎಸೆತವನ್ನು ಡೀಪ್ ಮಿಡ್ ವಿಕೆಟ್ ಕಡೆಗೆ ಆಡಿದರು ಮತ್ತು ಇಬ್ಬರೂ ಬ್ಯಾಟ್ಸ್ಮನ್ಗಳು ಎರಡು ರನ್ಗಳಿಗೆ ಓಡಿದರು.
ಈ ವೇಳೆ ಕೆಎಲ್ ರಾಹುಲ್ ಅದ್ಭುತ ಫೀಲ್ಡಿಂಗ್ ಮಾಡಿ,ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಆ ಚೆಂಡು ಸೀದಾ ಸ್ಟಂಪ್ಗೆ ಬಡಿಯಿತು.
https://www.instagram.com/reel/CkdP05sNRLf/?utm_source=ig_embed&utm_campaign=loading
ಪಿಚ್ನಲ್ಲಿ ಎಡವಿದ ಲಿಟನ್ ಡೈವ್ ಮಾಡಿದರಾದರೂ ಚೆಂಡು ವಿಕೆಟ್ಗೆ ಬೀಳುವ ಮುನ್ನ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ. ಇದು ಭಾರತಕ್ಕೆ ಮೊದಲ ವಿಕೆಟ್ ನೀಡಿದ್ದಲ್ಲದೆ, ಪ್ರಮುಖ ವಿಕೆಟ್ ಕೂಡ ಸಿಕ್ಕಿತು.
ಈ ಅದ್ಭುತ ಫೀಲ್ಡಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಫಾರ್ಮ್ಗೆ ಮರಳಿದ ರಾಹುಲ್ ಅಮೋಘ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 32 ಎಸೆತಗಳನ್ನು ಎದುರಿಸಿದ ರಾಹುಲ್ 3 ಬೌಂಡರಿ 4 ಸಿಕ್ಸರ್ ಸಹಿತ 50 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು.