ಭಾರತ-ಬಾಂಗ್ಲಾದೇಶ ಫ್ರೆಂಡ್‌ಶಿಪ್ ಪೈಪ್‌ಲೈನ್ ಇಂದು ಉದ್ಘಾಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತ-ಬಾಂಗ್ಲಾದೇಶ ಫ್ರೆಂಡ್‌ಶಿಪ್ ಪೈಪ್‌ಲೈನ್‌ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಭಾರತ-ಬಾಂಗ್ಲಾ ಗಡಿಯಾಚೆಗಿನ ಇಂಧನ ಪೈಪ್‌ಲೈನ್ ಇದಾಗಿದ್ದು, 377 ಕೋಟಿ ರೂ, ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿದೆ.

ಪೈಪ್‌ಲೈನ್ ಪ್ರತಿ ವರ್ಷಕ್ಕೆ ಒಂದು ಮಿಲಿಯನ್ ಮೆಟ್ರಿಕ್ ಟನ್ ಹೈ ಸ್ಪೀಡ್ ಡಿಸೇಲ್‌ನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಆರಂಭದಲ್ಲಿ ಉತ್ತರ ಬಾಂಗ್ಲಾದ ಏಳು ಜಿಲ್ಲೆಗಳಲ್ಲಿ ಹೈಸ್ಪೀಡ್ ಡಿಸೇಲ್‌ನ್ನು ಪೂರೈಸಲಾಗುತ್ತದೆ. ಭಾರತ-ಬಾಂಗ್ಲಾದೇಶದ ಸ್ನೇಹ ಪೈಪ್‌ಲೈನ್ ಇದಾಗಿದ್ದು, ಉಭಯ ದೇಶಗಳ ನಡುವೆ ಇಂಧನ ಭದ್ರತೆಯಲ್ಲಿ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲಿದೆ.

ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೋರೇಷನ್ ಅಧಿಕಾರಿಗಳ ಪ್ರಕಾರ, ಢಾಕಾಗೆ ಡಿಸೇಲ್ ರಫ್ತು ಮಾಡಲು ಭಾರತದ ಸಾಲ(ಎಲ್‌ಒಸಿ)ದ ಹಣವನ್ನು ಬಳಸಿ ಸುಮಾರು 3.46 ಶತಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಇಂಡಿಯಾ-ಬಾಂಗ್ಲಾದೇಶ ಫ್ರೆಂಡ್‌ಶಿಪ್ ಪೈಪ್ ಲೈನ್‌ನಲ್ಲಿ 130 ಕಿ,ಮೀ.ಯನ್ನು ಭಾರತ ಬಳಸಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!