2ನೇ ಟೆಸ್ಟ್‌ನಲ್ಲಿ ಬಾಂಗ್ಲಾ ಹುಲಿಗಳನ್ನು ಬಗ್ಗು ಬಡಿದ ಭಾರತ: ಸರಣಿ 2-0 ಕ್ಲೀನ್ ಸ್ವೀಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದ ಭಾರತ 2-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವಿಪ್‌ ಮಾಡಿದೆ.
145 ರನ್‌ಗಳ ಗುರಿ ಬೆನ್ನಟ್ಟಿದ ಭಾರತವು ನಾಲ್ಕು ವಿಕೆಟ್‌ಗಳಿಗೆ 45 ರನ್‌ಗಳಿಂದ ಇಂದಿನ ದಿನದಾಟ ಪ್ರಾರಂಭಿಸಿತು. 74 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಹೀಗಾಗಿ ಪಂದ್ಯ ಬಾಂಗ್ಲಾ ಪರ ವಾಲಿತ್ತು. ಆದರೆ ಅಂತಿಮ ಹಂತದಲ್ಲಿ ಅಶ್ವಿನ್ ಹಾಗೂ ಅಯ್ಯರ್ 71 ರನ್‌ಗಳ ಮುರಿಯದ ಜೊತೆಯಾಟ ಆಡುವುದರೊಂದಿಗೆ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಅಶ್ವಿನ್ 42 ರನ್ ಮತ್ತು ಅಯ್ಯರ್ 28 ರನ್ ಗಳಿಸಿ ಅಜೇಯರಾಗಿ ಉಳಿದರು. ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಜ್ (5/63) ಉತ್ತಮ ಪ್ರದರ್ಶನ ತೋರಿದರು..
ಇದಕ್ಕೂ ಮೊದಲು ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು 231 ರನ್‌ಗಳಿಗೆ ಆಲೌಟ್ ಮಾಡಿ 145 ರನ್‌ಗಳ ಗುರಿಯನ್ನು ನೀಡಿತು. ಲಿಟ್ಟನ್ ದಾಸ್ (73) ತಮ್ಮ 98 ಎಸೆತಗಳ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳೊಂದಿಗೆ ಮೂರನೇ ದಿನ ಬಾಂಗ್ಲಾದೇಶದ ಹೋರಾಟವನ್ನು ಮುನ್ನಡೆಸಿದ್ದರು. ಆರಂಭಿಕ ಆಟಗಾರ ಜಾಕಿರ್ ಹಸನ್ (51) ತಕ್ಕಮಟ್ಟಿಗೆ ಹೋರಾಟ ನಡೆಸಿದ್ದರು. ಮೊದಲ ಟೆಸ್ಟ್‌ನಲ್ಲಿ ಭಾರತ 188 ರನ್‌ಗಳ ಜಯ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ: 70.2 ಓವರ್‌ಗಳಲ್ಲಿ 227 & 231 (ಲಿಟ್ಟನ್ ದಾಸ್ 73, ಜಾಕಿರ್ ಹಸನ್ 51; ಅಕ್ಷರ್ ಪಟೇಲ್ 3/68).

ಭಾರತ: 314 ಮತ್ತು 47 ಓವರ್‌ಗಳಲ್ಲಿ 7 ವಿಕೆಟ್‌ಗೆ 145 (ರವಿಚಂದ್ರನ್ ಅಶ್ವಿನ್ ಔಟಾಗದೆ 42, ಅಕ್ಷರ್ ಪಟೇಲ್ 26, ಶ್ರೇಯಸ್ ಅಯ್ಯರ್ ಔಟಾಗದೆ 29; ಮೆಹಿದಿ ಹಸನ್ ಮಿರಾಜ್ 5/63).

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!