ಹರಿಣಗಳ ನಾಡಲ್ಲಿ ಭಾರತಕ್ಕೆ ಮತ್ತೆ ಸೋಲು: ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್​ಗಳ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಪ್​ಟೌನ್​ನಲ್ಲಿ ನಡೆದ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ತನ್ನದಾಗಿಸಿಕೊಂಡಿದೆ.
ಪೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 223ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 210ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಂ ಇಂಡಿಯಾ 13ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.
ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತ 198ರನ್​ಗಳಿಗೆ ಆಲೌಟ್​ ಆಯಿತು.
ಸರಣಿ ನಿರ್ಣಯಿಸುವ ಪಂದ್ಯದಲ್ಲಿ ಭಾರತ ನೀಡಿದ್ದ 212 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್​ 16 ರನ್​ ಹಾಗೂ ಎಲ್ಗರ್​​ 30ರನ್​ಗಳಿಕೆ ಮಾಡಿದರು. ಇದರ ಬಳಿಕ ಮೈದಾನಕ್ಕೆ ಬಂದ ಪೀಟರ್ಸನ್​​ 82ರನ್​ಗಳಿಕೆ ಮಾಡಿ ತಂಡಕ್ಕೆ ಗೆಲುವಿಗೆ ಕೊಡುಗೆ ನೀಡಿದರು.ಕೊನೆಯದಾಗಿ ಬವುಮಾ ಅಜೇಯ 32 ರನ್​ ಹಾಗೂ ಡುಸೆನ್​​ ಅಜೇಯ 41ರನ್​ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು.
ತಂಡ 63.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ನಷ್ಟಕ್ಕೆ 212ರನ್​​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.
ಟೀಂ ಇಂಡಿಯಾ ನೂತನ ಕೋಚ್​ ಆಗಿ ಆಯ್ಕೆಯಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​ಗೂ ಇಂದು ಮೊದಲ ಸೋಲಾಗಿದ್ದು, ಹರಿಣಗಳ ನಾಡಲ್ಲಿ ಭಾರತ ಮತ್ತೊಮ್ಮೆ ಸೋತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!