ಹೊಸದಿಗಂತ ವರದಿ,ಮೈಸೂರು;
ವೈಜ್ಞಾನಿಕ ಹಾಗೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಮಕರ ಸಂಕ್ರಾoತಿ, ಸಮೃದ್ಧಿಯ ಸಂಕೇತವಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಂಕ್ರಾoತಿ ಹಬ್ಬ ರೈತಾಪಿ ವರ್ಗಕ್ಕೆ ಸುಗ್ಗಿಯ ಹಬ್ಬವಾಗಿ ಸಮೃದ್ಧಿಯನ್ನು ಸಾರುತ್ತದೆ. ಎಳ್ಳು-ಬೆಲ್ಲ ಹಂಚಿ ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಬೇಕೆಂಬ ಸಂದೇಶವನ್ನು ಸಾರುವ ಈ ಹಬ್ಬದಲ್ಲಿ ಸೂರ್ಯ ತನ್ನ ಪಥ ಬದಲಾಯಿಸಿ ಹೇಗೆ ಪ್ರಕಾಶಮಾನವಾಗಿ ಬೆಳಗಲಿದ್ದಾನೋ ಅದೇ ರೀತಿಯಲ್ಲಿ ಪ್ರತಿಯೊಬ್ಬರ ಬಾಳಲ್ಲಿ ಹೊಸ ಚೈತನ್ಯ ಮೂಡಲಿ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ವಿಶ್ವಕ್ಕೆ ಮಾರಕವಾಗಿರುವ ಕೊರೋನಾದ ಆರ್ಭಟ ಕೊನೆಯಾಗಲಿ. ಹಿಂದಿನ ಕಹಿ ನೆನಪುಗಳು ಮರೆಯಾಗಲಿ. ಕನಸುಗಳು ನನಸಾಗಲಿ. ಜನಜೀವನ ಸಹಜಸ್ಥಿತಿಗೆ ತಲುಪಲಿ. ಜನಸಾಮಾನ್ಯರ ಆರ್ಥಿಕ ಮಟ್ಟ ಸುಧಾರಿಸಲಿ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬವಾಗಲಿ. ಸಂಕ್ರಾoತಿ ಎಲ್ಲರಿಗೂ ಸುಖವನ್ನು ತರಲಿ ಎಂದು ಹಾರೈಸಿದ್ದಾರೆ.