ಪಾಕಿಸ್ತಾನ ಮೂಲದ 35 ಯೂಟ್ಯೂಬ್‌ ಚಾನಲ್‌ ಗಳು ನಿಷೇಧ: ಕೇಂದ್ರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಭಾರತ ವಿರೋಧಿ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಪಾಕಿಸ್ತಾನ ಮೂಲದ 35 ಯೂಟ್ಯೂಬ್‌ ಚಾನಲ್‌ ಗಳನ್ನು ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದ ಖಾತೆಯನ್ನು ನಿಷೇಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತೀರ್ಮಾನಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ಭಾರತದ ವಿರುದ್ಧ ತಪ್ಪು ಮಾಹಿತಿ ನೀಡುತ್ತಿರುವ 35 ಯೂಟ್ಯೂಬ್‌ ಚಾನಲ್‌, 2 ವೆಬ್‌ ಸೈಟ್‌, 2 ಟ್ವಿಟರ್‌, 2 ಇನ್‌ ಸ್ಟಾಗ್ರಾಂ ಹಾಗೂ ಒಂದು ಫೇಸ್‌ ಬುಕ್‌ ಖಾತೆಯನ್ನು ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅನ್ವಯ ತರಲಾಗಿದೆ ಎಂದರು.
ಈ ಹಿಂದೆ ಡಿ.2021ರಲ್ಲಿ 20 ಚಾನಲ್‌ ಗಳನ್ನು ನಿರ್ಬಂಧಿಸಲಾಗಿತ್ತು. ಇವುಗಳಲ್ಲಿ ಬರುವ ವಿಷಯಗಳು ಭಾರತದ ಸಾರ್ವಭೌಮತೆಯ ವಿರುದ್ಧವಾಗಿದೆ ಎಂದರು.
ಇವುಗಳಲ್ಲಿ ಭಾರತೀಯ ಸೇನಾ ಪಡೆ, ಜಮ್ಮು ಕಾಶ್ಮೀರ, ಭಾರತ- ವಿದೇಶಿ ವ್ಯವಹಾರ ಹಾಗೂ ಸಂಬಂಧಗಳ ಸೇರಿದಂತೆ ಇತರ ಪ್ರತ್ಯೇಕವಾದಿ ಸಿದ್ಧಾಂತಗಳನ್ನು ಆಧರಿಸಿ ಈ ಚಾನಲ್‌ ಗಳು ಸುಳ್ಳು ಮಾಹಿತಿ ರವಾನಿಸುತ್ತಿದೆ. ಸುಳ್ಳು ಮಾಹಿತಿ ಪ್ರಸಾರ ಮಾಡುವ ಚಾನಲ್‌ ಗಳ ಪಟ್ಟಿಯಲ್ಲಿ ಖಬರ್‌ ವಿತ್‌ ಫ್ಯಾಕ್ಟ್ಸ್‌, ಗ್ಲೋಬಲ್‌ ಟ್ರೂತ್‌, ಇನ್ಫಾರ್ಮೇಷನ್‌ ಹಬ್‌ ಸೇರಿದಂತೆ ಹಲವು ಮಾಧ್ಯಮಗಳು ಸೇರಿವೆ. ಈ ಚಾನಲ್‌ ಗಳಲ್ಲಿ ಒಟ್ಟು 1.2 ಕೋಟಿ ಜನ ಸಬ್‌ ಸ್ಕ್ರೈಬರ್‌ ಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!