Saturday, September 23, 2023

Latest Posts

ದಿನಭವಿಷ್ಯ| ಈ ರಾಶಿಯವರಿಗೆ ಇಂದು ಹೆಚ್ಚುವರಿ ಜವಾಬ್ದಾರಿ, ದಿನವಿಡೀ ಕೆಲಸದಲ್ಲಿ ಮಗ್ನ…

ದಿನಭವಿಷ್ಯ

ಮೇಷ
ವೃತ್ತಿಯಲ್ಲಿ ದಿನವಿಡೀ ಕಾರ್ಯದೊತ್ತಡ.ಹೊಣೆಗಾರಿಕೆ ಹೆಚ್ಚಳ. ಕೌಟುಂಬಿಕ ವಿಚಾರದಲ್ಲಿ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಭಿನ್ನಮತ ನಿವಾರಿಸಿ.

ವೃಷಭ
ಉದ್ಯೋಗಕ್ಕೆ ಸಂಬಂಧಿಸಿ ಪ್ರಯಾಣ ಸಂಭವ.ಆದರೆ ದೊಡ್ಡ ಯಶಸ್ಸು ನಿರೀಕ್ಷಿಸ ಬೇಡಿ.ಕೌಟುಂಬಿಕ ಪರಿಸರದಲ್ಲಿ  ಒತ್ತಡ ಮರೆಯುವಿರಿ.ಬಂಧುಗಳ ಸಹಕಾರ.

ಮಿಥುನ
ಇಂದು ನೀವು ನಿರೀಕ್ಷಿಸಿದ ಯಶಸ್ಸು ದೊರಕುವುದಿಲ್ಲ. ಇದರಿಂದ ವಿಶ್ವಾಸ ಕುಂದಬಹುದು. ಪ್ರಮುಖ ಕಾರ್ಯ ಮುಂದೂಡಿ.

ಕಟಕ
ಸಂಬಂಧದಲ್ಲಿ ಮತ್ತೆ ಮತ್ತೆ ತಪ್ಪು ಮಾಡಬೇಡಿ.ಸರಿಪಡಿಸಲು ಆದ್ಯತೆ ಕೊಡಿ.ಇಲ್ಲವಾದರೆ ಮನಸ್ತಾಪ ಮತ್ತಷ್ಟು ಮುಂದುವರಿದೀತು.ಅಹಂ ಬಿಟ್ಟುಬಿಡಿ.

ಸಿಂಹ
ಕಂಡದ್ದನ್ನೆಲ್ಲ ಖರೀದಿಸುವ ಹುಮ್ಮಸ್ಸಿ ನಲ್ಲಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವಿರಿ. ಖರೀದಿ ಉತ್ಸಾಹ ನಿಯಂತ್ರಿಸಿ. ಆರೋಗ್ಯಕ್ಕೆ ಗಮನ ಕೊಡಿ.

ಕನ್ಯಾ
ವೃತ್ತಿಯಲ್ಲಿ ಹಾಗೂ ಮನೆಯಲ್ಲಿ ಸಣ್ಣಪುಟ್ಟ ಕಿರಿಕಿರಿ ಬಾಸುವುದು.ಅಸಹನೆಯನ್ನು ನಿಯಂತ್ರಿಸಿ.ದುಡುಕಿನ ಪ್ರತಿಕ್ರಿಯೆ ತೋರಲು ಹೋಗಬೇಡಿ.

ತುಲಾ
ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿ. ಇದರಿಂದ ದಿನವಿಡೀ ಕೆಲಸದಲ್ಲಿ ಮಗ್ನ. ಇನ್ನಿತರ ವಿಚಾರಗಳಿಗೆ ಗಮನ ಹರಿಸಲು ಸಮಯ ಸಾಲಲಾರದು.

ವೃಶ್ಚಿಕ
ಕೆಲಸ ಮುಗಿಸಲು ನೀವು ಕಠಿಣ ಶ್ರಮ ಪಡಬೇಕು. ಸುಲಭವೆಂದುಕೊಂಡ ಕೆಲಸವೂ ಕಠಿಣ ವಾದೀತು. ಕೆಲವರ ಅಸಹಕಾರ ಕೂಡ ಕಾಡುವುದು.

ಧನು
ಹಿಡಿದ ಕಾರ್ಯ ಮುಗಿಸಬೇಕಾದರೆ ದೃಢ ನಿಲುವು ತಳೆಯಿರಿ. ಸಣ್ಣಪುಟ್ಟ ಅಡ್ಡಿಗಳಿಗೂ ಹಿಂಜರಿಯದಿರಿ.ಕೌಟುಂಬಿಕ ಅಸಹಕಾರ ನೆಮ್ಮದಿ ಕೆಡಿಸುವುದು.

ಮಕರ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ನಿಮಗೆ ಪೂರಕ ಬೆಳವಣಿಗೆ. ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿ.  ಆಪ್ತರ ಜತೆಗಿನ ಸಂಬಂಧ ವೃದ್ಧಿಯಾಗುವುದು.

ಕುಂಭ
ಕೆಲವು ಸವಾಲು ಎದುರಿಸುವಿರಿ.ಆದರೆ ಅವನ್ನು ಸಮರ್ಥವಾಗಿ ನಿಭಾಯಿಸಲೂ ಸಫಲರಾಗುವಿರಿ. ನಿಮಗೆ ಸೂಕ್ತ ಬೆಂಬಲ ಕೂಡ ದೊರಕುವುದು.

ಮೀನ
ವೃತ್ತಿಯಲ್ಲಿ ನಿಮಗೆ ಪೂರಕ ದಿನವಲ್ಲ. ನಿಮ್ಮ ನಿರ್ಧಾರ ತಪ್ಪಾಗಬಹುದು. ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!