ಭಾರತದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಪಾಕ್‌ ರಾಯಭಾರ ಕಚೇರಿಗಳ ಅಧಿಕೃತ ಟ್ವಿಟರ್‌ ಖಾತೆಗಳೇ ಬ್ಲಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಪಾಕಿಸ್ತಾನ ರಾಯಭಾರ ಕಚೇರಿಗಳ ಹಲವಾರು ಅಧಿಕೃತ ಟ್ವಿಟರ್‌ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕೃತ ಖಾತೆಗಳನ್ನು ಟ್ವಿಟರ್ ಇಂಡಿಯಾವು ತಡೆಹಿಡಿದಿದೆ. ಪಾಕಿಸ್ತಾನದ ರಾಷ್ಟ್ರೀಯ ರೇಡಿಯೋ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
ಕಾನೂನುನಾತ್ಮಕ ಪ್ರಕ್ರಿಯೆಯಾಗಿ ಭಾರತದಲ್ಲಿ ಈ ಖಾತೆಗಳನ್ನು ತಡೆಹಿಡಿಯಲಾಗಿದೆ.ಈ ಖಾತೆಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರದರ್ಶಿಸಲಾಗುತ್ತಿತ್ತು. ಭಾರತದಲ್ಲಿ ನಿಷೇಧಿಸಲಾದ ಟ್ವಿಟರ್‌ ಹ್ಯಾಂಡಲ್‌ಗಳನ್ನು ತಕ್ಷಣವೇ ಮರುಪ್ರವೇಶ ನೀಡುವಂತೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ್ರಹಿಸಿದೆ.
ಭಾರತ ವಿರೋಧಿ ವಿಷಯವನ್ನು ಹರಡುತ್ತಿದೆ ಮತ್ತು ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುತ್ತಿರುವ ಆರೋಪದ ಮೇರೆಗೆ ಆರು ಪಾಕಿಸ್ತಾನಿ ಚಾನೆಲ್‌ಗಳು ಸೇರಿದಂತೆ 16 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B ಸಚಿವಾಲಯ) ಕೆಲ ತಿಂಗಳ ಹಿಂದೆ ನಿರ್ಬಂಧಿಸಿತ್ತು. ಇದೀಗ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಸಚಿವಾಲಯ ಪಾಕ್‌ ಅಧಿಕೃತ ಟ್ವಿಟರ್‌ ಖಾತೆಗಳಿಗೆ ನಿರ್ಬಂಧ ಹೇರಿದೆ. ಅಮಾನತುಗೊಂಡ ಭಾರತ-ವಿರೋಧಿ ಯೂಟ್ಯೂಬ್ ಚಾನೆಲ್‌ಗಳು 68 ಕೋಟಿ  ವೀಕ್ಷಕರನ್ನು ಹೊಂದಿದ್ದವು.
ಭಾರತದಲ್ಲಿ ಜನರನ್ನು ಭಯಭೀತಗೊಳಿಸುವ, ಕೋಮು ಸೌಹಾರ್ದತೆಯನ್ನು ಪ್ರಚೋದಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಿರುವ ಈ ಟ್ವಿಟರ್ ಹ್ಯಾಂಡಲ್‌ಗಳು ಸುಳ್ಳು, ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿವೆ ಎಂದು I&B ಸಚಿವಾಲಯ ಹೇಳಿದೆ. ಈ ಟ್ವಿಟರ್‌ ಖಾತೆಗಳು ಐಟಿ ನಿಯಮಗಳು, 2021 ರ ಅಡಿಯಲ್ಲಿ ಸರ್ಕಾರವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸಹ ಉಲ್ಲಂಘಿಸಿವೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಉಕ್ರೇನ್‍ನಲ್ಲಿನ ಪರಿಸ್ಥಿತಿ, ಭಾರತದ ವಿದೇಶಿ ಸಂಬಂಧಗಳಂತಹ ವಿವಿಧ ವಿಷಯಗಳ ಕುರಿತು ಭಾರತದ ಬಗ್ಗೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‍ಗಳನ್ನು ಸಂಘಟಿತ ರೀತಿಯಲ್ಲಿ ಬಳಸಲಾಗಿತ್ತು. ಈ ಚಾನೆಲ್‍ಗಳ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಅಜೆಂಡಾವನ್ನು ಹೊಂದಿದೆ ಎಂದು ಭಾರತವು ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!