ಭಾರತಕ್ಕೆ ಬರುತ್ತಿದ್ದ ಸರಕು-ಸಾಗಣೆ ಹಡಗು ಹೈಜಾಕ್: ಹೌತಿ ಉಗ್ರರ ಕೃತ್ಯ ಎಂದ ಇಸ್ರೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತಕ್ಕೆ ಬರುತ್ತಿದ್ದ ಅಂತರಾಷ್ಟ್ರೀಯ ಸರಕು ಸಾಗಣೆ ಹಡಗನ್ನು ಹೌತಿ ಉಗ್ರರು ಹೆಲಿಕಾಪ್ಟರ್ ಮೂಲಕ ಅಪಹರಿಸಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ತಿಳಿಸಿದೆ. ಟರ್ಕಿಯಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ಹಡಗನ್ನು ದಕ್ಷಿಣ ಕೆಂಪು ಸಮುದ್ರದಲ್ಲಿ ಹೈಜಾಕ್‌ ಆಗಿದ್ದು, ಇದು ಇರಾನ್ ಭಯೋತ್ಪಾದನೆಯ ಕೃತ್ಯ ಎಂದು ಇಸ್ರೇಲ್ ಆರೋಪಿಸಿದೆ. ಅಪಹರಿಸಿದ ಹಡಗಿನಲ್ಲಿ ಇಸ್ರೇಲಿ ಪ್ರಜೆಗಳು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗನ್ನು ದಕ್ಷಿಣ ಕೆಂಪು ಸಮುದ್ರದಿಂದ ಯೆಮೆನ್‌ನ ಬಂದರಿಗೆ ಎಳೆದೊಯ್ಯಲಾಗಿದೆ. ಹೌತಿಗಳು ಹೆಲಿಕಾಪ್ಟರ್ ಬಳಸಿ ಹಡಗಿನ ಮೇಲೆ ಉಗ್ರರನ್ನು ಇಳಿಸುವ ಮೂಲಕ ಹಡಗನ್ನು ಅಪಹರಿಸಿದರು. ಸರಕು ಸಾಗಣೆ ಹಡಗು ಬ್ರಿಟಿಷ್ ಕಂಪನಿಗೆ ಸೇರಿದ್ದು, ಜಪಾನಿನ ಕಂಪನಿ ನಿರ್ವಹಿಸುತ್ತಿದೆ ಎಂದು ಟೆಲ್ ಅವಿವ್ ಹೇಳಿದೆ. ಹಡಗಿನಲ್ಲಿ ಉಕ್ರೇನಿಯನ್, ಬಲ್ಗೇರಿಯನ್, ಫಿಲಿಪಿನೋ, ಮೆಕ್ಸಿಕನ್ ಸೇರಿದಂತೆ ವಿವಿಧ ದೇಶಗಳ 25 ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

ಹಡಗಿನಲ್ಲಿ ಭಾರತೀಯ ಸಿಬ್ಬಂದಿ ಇಲ್ಲ ಎಂಬುದನ್ನು ಇಸ್ರೇಲ್ ಖಚಿತಪಡಿಸಿದೆ. ಇಂತಹ ಘಟನೆಗಳು ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!