Saturday, December 9, 2023

Latest Posts

ಉನ್ನಾವೋದಲ್ಲಿ ಭೀಕರ ವಿದ್ಯುತ್ ದುರಂತ, ಫ್ಯಾನ್‌ನಿಂದ ವಿದ್ಯುತ್ ಪ್ರವಹಿಸಿ ನಾಲ್ವರು ಮಕ್ಕಳು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಉನ್ನಾವೋದಲ್ಲಿ ಫ್ಯಾನ್‌ನಿಂದ ವಿದ್ಯುತ್ ಪ್ರವಹಿಸಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಕೊನೆಯುಸಿರೆಳೆದಿದ್ದಾರೆ.

ಉನ್ನಾವೋದ ಲಾಲಮಂಖೇಡ ಗ್ರಾಮದ ವೀರೇಂದ್ರ ಕುಮಾರ್ ಅವರ ನಾಲ್ವರು ಮಕ್ಕಳಾದ ಮಯಾಂಕ್ ಹಿಮಾಂಶಿ ಹಿಮಾಂಕ್ ಹಾಗೂ ಮಾನ್ಶಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆ.

ತಂದೆ ತಾಯಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊಲಕ್ಕೆ ಕೆಲಸ ಮಾಡಲು ತೆರಳಿದ್ದಾರೆ. ಈ ವೇಳೆ ಮಕ್ಕಳು ಫ್ಯಾನ್ ಮುಂದೆ ನಿಂತು ಆಟವಾಡುತ್ತಿದ್ದರು. ಒಬ್ಬರಿಗೆ ಕರೆಂಟ್ ಶಾಕ್ ಹೊಡೆದಿದ್ದು, ಆತನ ಕೂಗಾಟದ ಸದ್ದಿಗೆ ಉಳಿದ ಮಕ್ಕಳು ಸಹಾಯಕ್ಕೆ ಆಗಮಿಸಿದ್ದಾರೆ.

ಒಬ್ಬರ ಹಿಂದಂತೆ ಒಬ್ಬರು ಆಗಮಿಸಿ ಇತರರನ್ನು ರಕ್ಷಿಸಲು ಯತ್ನಿಸಿ ಮೃತಪಟ್ಟಿದ್ದಾರೆ. ಸ್ಥಳೀಯರು ಪೋಷಕರಿಗೆ ಮಾಹಿತಿ ನೀಡಿದ್ದು ಮನೆಗೆ ಬಂದು ನೋಡಿದಾಗ ನಾಲ್ವರು ಮಕ್ಕಳು ಮನೆಯಲ್ಲಿಯೇ ಮೃತಪಟ್ಟಿದ್ದಾರೆ.

ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬರಸಗವಾರ ಠಾಣೆಯಲ್ಲಿ ಘಟನೆ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!