ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ಪೂರ್ವ ಲಡಾಖ್ ವಲಯದ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸಂಘಟಿತ ಗಸ್ತು ನಡೆಸಲು ಭಾರತ ಮತ್ತು ಚೀನಾ ಸೇನೆಗಳು ಒಪ್ಪಿಕೊಂಡಿವೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಎರಡೂ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಪಡೆಗಳ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಈ ತಿಂಗಳ ಮೊದಲ ವಾರದಲ್ಲಿ ಎರಡೂ ಕಡೆಯವರು ಸಂಘಟಿತ ಗಸ್ತು ಆರಂಭಿಸಲಾಗಿದೆ.
ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಪ್ರತಿ ವಾರ ಎರಡೂ ಕಡೆಯಿಂದ ತಲಾ ಒಂದು ಗಸ್ತು ತಿರುಗಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.
ಪ್ರತಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಒಂದು ಗಸ್ತು ನಡೆಸುತ್ತಾರೆ ಮತ್ತು ಚೀನಾ ಸೈನಿಕರು ಒಂದು ಗಸ್ತು ನಡೆಸುತ್ತಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.