ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಇದರ ಮಧ್ಯ ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ವಿರುದ್ಧ ಬಿಜೆಪಿಯು ಮುಖ್ಯ ಚುನಾವಣಾ ಆಯುಕ್ತರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದೆ.
ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ಎಸ್ ಕೆ ಅಕ್ಕಿಯಿಂದ ದೂರು ಸಲ್ಲಿಕೆಯಾಗಿದೆ. ನನ್ನ ವಿರುದ್ಧ ಯಾವುದೇ ಕೇಸ್ ಗಳು ಇಲ್ಲ ಎಂದು ಯಾಸೀರ್ ಪಠಾಣ್ ಹೇಳಿದ್ದರು. ಪಠಾಣ್ ಆಫೀಡಿವೇಟ್ ನಲ್ಲಿ ಕೇಸ್ ಗಳೇ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. 2023ರ ಚುನಾವಣೆಯ ವೇಳೆ ಪಠಾಣ್ ವಿರುದ್ಧ ಹಲವು ಕೇಸ್ ಗಳಿದ್ದವು. ಆದರೆ ಈಗ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಕೇಸ್ ಗಳು ಇಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಯಾಗಲಿ ಎಂದು ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
2023ರ ಚುನಾವಣೆಯಲ್ಲಿ ಯಾಸಿರ್ ಪಠಾಣ್ ಸಲ್ಲಿಸಿದ ಆಫೀಡಿವೇಟ್ ಸಮೇತ ದೂರು ನೀಡಿದ್ದಾರೆ.