ASIAN GAMES 2023 | ಪದಕಗಳ ಅರ್ಧಶತಕ ಪೂರ್ಣಗೊಳಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.
ಭಾನುವಾರವಷ್ಟೇ ಟೀಂ ಇಂಡಿಯಾ ಒಂದೇ ದಿನದಲ್ಲಿ 15 ಪದಗ ಗೆದ್ದು ಸಾಧನೆ ಮಾಡಿದೆ. ಈ ಮೂಲಕ ಭಾರತ 2010ರಲ್ಲಿ ತಾನೇ ಮಾಡಿದ್ದ ದಾಖಲೆಯನ್ನು ಮುರಿದಿದೆ.
2010ರ ಏಷ್ಯನ್ ಗೇಮ್ಸ್‌ನಲ್ಲಿ ಒಂದೇ ದಿನದಲ್ಲಿ ಟೀಂ ಇಂಡಿಯಾ 11 ಪದಕ ಗಳಿಸಿತ್ತು.

ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟಾರೆ ಭಾರತ 53 ಪದಕಗಳನ್ನು ಗಳಿಸಿದ್ದು, ಹಾಫ್ ಸೆಂಚುರಿ ಪೂರ್ಣಗೊಳಿಸಿದೆ. ಟೂರ್ನಿಯ ಎಂಟನೇ ದಿನಕ್ಕೆ ಭಾರತ 53  ಪದಗಳನ್ನು ಬಾಚಿಕೊಂಡಿದೆ, ಇದರಲ್ಲಿ ಅತಿ ಹೆಚ್ಚು ಬೆಳ್ಳಿ ಪದಕಗಳಿವೆ. ಎರಡನೇ ಸ್ಥಾನ ಕಂಚಿಗೆ ಹಾಗೂ ಮೂರನೇ ಸ್ಥಾನ ಬಂಗಾರಕ್ಕಿದೆ.

ಒಟ್ಟಾರೆ 13 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಈವರೆಗೂ ಚೀನಾ 243 ಪದಕಗಳನ್ನು ಗೆದ್ದು ಮೊದನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕೊರಿಯಾ, ಜಪಾನ್ ಹಾಗೂ ಭಾರತ ಸ್ಥಾನಗಳನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!