ASIAN GAMES| ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಬ್ಬರ, ಒಂದೇ ದಿನದಲ್ಲಿ 15 ಪದಕಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾನುವಾರ ನಡೆದ ಏಷ್ಯನ್ ಗೇಮ್ಸ್ ನಲ್ಲಿ 15 ಪದಕಗಳನ್ನು ಗೆದ್ದು ಭಾರತ ವಿಜೃಂಭಿಸಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಆಟಗಾರರು ಬೃಹತ್ ದಾಖಲೆ ನಿರ್ಮಿಸಿದ್ದು ಇದೇ ಮೊದಲು. ಈ ಹಿಂದೆ 2010ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ 11 ಪದಕ ಗೆದ್ದಿತ್ತು..ಈಗ ಆ ದಾಖಲೆಯನ್ನು ಹಿಂದಿಕ್ಕಿದೆ.

  • ಭಾರತದ ಪುರುಷರ ಶೂಟಿಂಗ್ ತಂಡದ ಮೂವರು ಕೈನಾನ್ ಡೇರಿಯಸ್, ಜೊರಾವರ್ ಸಿಂಗ್ ಮತ್ತು ಪೃಥ್ವಿರಾಜ್ ತೊಂಡೈಮಾನ್ ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು, ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
  • ಪುರುಷರ 3000ಮೀ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಅವಿನಾಶ್ ಸೇಬಲ್ 8:19.53 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಐತಿಹಾಸಿಕ ಚಿನ್ನದ ಪದಕ ಗೆದ್ದರು.
  • ತಜಿಂದರ್‌ಪಾಲ್ ಸಿಂಗ್ ನೂರ್ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಅಂತಿಮ ಶಾಟ್‌ಪುಟ್‌ ಪ್ರಯತ್ನದಲ್ಲಿ 20.36 ಮೀ ಎಸೆದು ಸತತ ಎರಡನೇ ಚಿನ್ನದ ಪದಕವನ್ನು ಗೆದ್ದರು.
  • ಅದಿತಿ ಅಶೋಕ್ ಏಷ್ಯನ್ ಗೇಮ್ಸ್‌ನ ಗಾಲ್ಫ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಪದಕ ವಿಜೇತೆ.
  • ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಬೆಳ್ಳಿ ಪದಕವನ್ನು ಗೆದ್ದರು.
  • ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ ಭಾರತದ ಮಹಿಳಾ ಶೂಟಿಂಗ್ ತಂಡವು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ರಾಜೇಶ್ವರಿ ಕುಮಾರಿ, ಮನೀಶಾ ಖೀರ್ ಮತ್ತು ಪ್ರೀತಿ ರಜಾಕ್ ಮೂವರು ದ್ವಿತೀಯ ಸ್ಥಾನ ಪಡೆದರು.
  • ಮಹಿಳೆಯರ 100 ಮೀ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಮೂರನೇ ಸ್ಥಾನ ಪಡೆದು ಮತ್ತೊಂದು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
  • ಮಹಿಳೆಯರ 1500 ಮೀ ಓಟದಲ್ಲಿ ಹರ್ಮಿಲನ್ ಬೇನ್ಸ್ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದರು.
  • ಲಾಂಗ್‌ಜಂಪ್‌ ಫೈನಲ್‌ನಲ್ಲಿ ಮುರಳಿ ಶ್ರೀಶಂಕರ್‌ ಬೆಳ್ಳಿ ಪದಕ ಗೆದ್ದರು.
  • ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಮೊದಲ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿತು.
  • ಜಿನ್ಸನ್ ಜಾನ್ಸನ್ ತಮ್ಮ ಪ್ರತಿಸ್ಪರ್ಧಿ ಅಜಯ್ ಕುಮಾರ್ ಅವರನ್ನು ಹಿಂದಿಕ್ಕಿ ಕಂಚಿನ ಪದಕ ಗೆದ್ದರು.
  • ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ನಂದಿನಿ ಅಗಸರ ಕಂಚಿನ ಪದಕಕ್ಕೆ ಕೊರಳೊಡ್ಡಿದರು
  • ಸೀಮಾ ಪೂನಿಯಾ ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದರು.
  • ಕೈನಾನ್ ಚನೈ ಪುರುಷರ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡರು.

ಪದಕಗಳನ್ನು ಗೆಲ್ಲುವ ಮೂಲಕ ಭಾರತ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!