ಮತ್ತೆ ಶ್ರೀಲಂಕಾಕ್ಕೆ ಹೆಗಲುಕೊಟ್ಟ ಭಾರತ: 11,000 MT ಅಕ್ಕಿ ರಫ್ತು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಈಗಾಗಲೇ ಅನೇಕ ಬಾರಿ ಸಹಾಯ ಹಸ್ತ ಚಾಚಿರುವ ಭಾರತ ಇದೀಗ ಮತ್ತೆ 11,000 MT ಅಕ್ಕಿಯನ್ನು ಕೊಲಂಬೊಗೆ ತಲುಪಿಸಿದೆ
ಈ ಕುರಿತ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದ್ದು, ಭಾರತದಿಂದ 11,000 MT ಅಕ್ಕಿ ಇಂದು ಚೆನ್ ಗ್ಲೋರಿ ಹಡಗಿನಲ್ಲಿ ಕೊಲಂಬೊ ತಲುಪಿದೆ.ಕಳೆದ ವಾರವೊಂದರಲ್ಲೇ 16,000 MT ಅಕ್ಕಿಯನ್ನು ಬಹುಮುಖ ಬೆಂಬಲದ ಅಡಿಯಲ್ಲಿ ಸರಬರಾಜು ಮಾಡಲಾಗಿದೆ.’ಎಂದು ಹೇಳಿದೆ.
ಶ್ರೀಲಂಕಾವು ಪ್ರಸ್ತುತ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದ್ದು, ಇದು ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆಗೆ ಕಾರಣವಾಗಿದೆ ಮತ್ತು ಆರ್ಥಿಕ ಸಹಾಯಕ್ಕಾಗಿ ಸ್ನೇಹಪರ ರಾಷ್ಟ್ರಗಳ ಸಹಾಯವನ್ನು ಕೋರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!