ಭಾರತದಲ್ಲಿದೆ ಸಾಟಿಯಿಲ್ಲದಷ್ಟು ವೈವಿಧ್ಯಮಯ ಪಕ್ಷಿ ಸಂಕುಲ, ಇವುಗಳ ಅವನತಿಗೆ ಕಾರಣವೇನು? ಸಂರಕ್ಷಣೆ ಹೇಗೆ?

– ಬಿವಾಶ್ ರಂಜನ್
ಹೆಚ್ಚುವರಿ ಅರಣ್ಯ ಮಹಾನಿರ್ದೇಶಕರು (ವನ್ಯಜೀವಿ),
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ

ಭಾರತವು ಸಾಟಿಯಿಲ್ಲದ ಪಕ್ಷಿ ವೈವಿಧ್ಯತೆಯ ತಾಣವಾಗಿದ್ದು, ವೈವಿಧ್ಯಮಯ ಭೂದೃಶ್ಯ ಸರಣಿಯ ನೆಲೆಯಾಗಿದ್ದು, ಅನೇಕ ಪಕ್ಷಿ ಪ್ರಭೇದಗಳ ವೈವಿಧ್ಯತೆಯನ್ನು ಹೊಂದಿದೆ. ಉತ್ತರದಲ್ಲಿ ಹಿಮದಿಂದ ಆವೃತವಾದ ಹಿಮಾಲಯದಿಂದ ಹಿಡಿದು ದಕ್ಷಿಣದಲ್ಲಿ ಪಶ್ಚಿಮ ಘಟ್ಟಗಳ ಪ್ರಾಚೀನ ಕಾಡುಗಳವರೆಗೆ, ಪಶ್ಚಿಮದಲ್ಲಿ ರಾಜಸ್ಥಾನದ ಶುಷ್ಕ ಮರುಭೂಮಿಯಿಂದ ಹಿಡಿದು ಈಶಾನ್ಯದ ಸೊಂಪಾದ ಹಸಿರಿನ ಮೆತ್ತೆಯವರೆಗೆ, ಭಾರತದ ಪಕ್ಷಿ ನಿವಾಸಗಳು ಅದರ ಭೌಗೋಳಿಕತೆಯಷ್ಟೇ ವೈವಿಧ್ಯಮಯವಾಗಿವೆ.

ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್-2023 ವರದಿಯ ಪ್ರಕಾರ, ಭಾರತವು 1,300ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ನೆಲೆಯಾಗಿದೆ, ಇದು ಜಾಗತಿಕ ಪಕ್ಷಿ ವೈವಿಧ್ಯತೆಯ ಸುಮಾರು ಶೇಕಡಾ 12.40ರಷ್ಟಿದೆ. ಈ 1,353 ಪಕ್ಷಿ ಪ್ರಭೇದಗಳಲ್ಲಿ, 78 ಅಂದರೆ ಶೇಕಡಾ 5%ರಷ್ಟು ಸ್ವದೇಶೀ ಪ್ರಭೇದಗಳಾಗಿವೆ. ಈ ಪ್ರಭೇದಗಳ ಆವಾಸಸ್ಥಾನದ ನಾಶ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯು ಅವುಗಳ ಅಸ್ತಿತ್ವಕ್ಕೆ ಕಂಟಕವಾಗಿರುವುದರಿಂದ, ಈ ರೋಮಾಂಚಕ ಖಗಗಳ ಹಿಂಡು ಹೆಚ್ಚು ಅಪಾಯಕಾರಿ ಭವಿಷ್ಯವನ್ನು ಎದುರಿಸುತ್ತಿದೆ.

ಈ ಪ್ರದೇಶದ ಪಕ್ಷಿಗಳು ಪ್ರಸ್ತುತ ಅನೇಕ ಅಪಾಯಗಳನ್ನು ಎದುರಿಸುತ್ತಿವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಆವಾಸಸ್ಥಾನದ ನಷ್ಟ ಮತ್ತು ಅವನತಿ ಮತ್ತು ಪ್ರಮುಖವಾಗಿ ಮಾನವ ವನ್ಯಜೀವಿ ಸಂಘರ್ಷ, ಆವಾಸಸ್ಥಾನಗಳ ಹಾನಿ, ಅವನತಿ ಮತ್ತು ನಷ್ಟದ ಮೂಲ ಕಾರಣಗಳು ಸಂಕೀರ್ಣವಾಗಿದ್ದು, ಪರಸ್ಪರ ಸಂಬಂಧ ಹೊಂದಿವೆ.

ಹವಾಮಾನ ಬದಲಾವಣೆ: ಇವುಗಳಲ್ಲಿ ನಗರೀಕರಣ, ಮೂಲಸೌಕರ್ಯ ಅಭಿವೃದ್ಧಿ, ಪ್ರಸ್ತುತ ಕೃಷಿ ಪದ್ಧತಿಗಳು, ಅತಿಯಾದ ಶೋಷಣೆಯಿಂದಾಗಿ ನೈಸರ್ಗಿಕ ಅರಣ್ಯ ಪ್ರದೇಶದ ಅವನತಿ, ಸಂಪನ್ಮೂಲಗಳಿಗೆ ಹೆಚ್ಚಿನ ವಿದೇಶೀ ಬೇಡಿಕೆ ಮತ್ತು ಸಂರಕ್ಷಣಾ ಪರ ನೀತಿಗಳ ಅಸಮರ್ಪಕ ಕಾನೂನು ಜಾರಿ ಇವೆಲ್ಲವೂ ಸೇರಿವೆ. ಹವಾಮಾನ ಬದಲಾವಣೆಯು ಪಕ್ಷಿಗಳಿಗೆ ಮತ್ತೊಂದು ಅಪಾಯವಾಗಿದೆ – ಬದಲಾಗುತ್ತಿರುವ ಹವಾಮಾನ, ಬದಲಾದ ವಲಸೆ ಮಾರ್ಗಗಳು ಮತ್ತು ಆಹಾರ ಲಭ್ಯತೆಯಲ್ಲಿನ ತೊಡಕುಗಳು ಅನೇಕ ಪಕ್ಷಿ ಪ್ರಭೇದಗಳ ಉಳಿವಿನ ಮೇಲೆ ಪರಿಣಾಮ ಬೀರುತ್ತಿವೆ.

Birding in India: regions, birds and when to visit | Bubo Birdingಹೆಚ್ಚುತ್ತಿರುವ ತಾಪಮಾನ: ಹೆಚ್ಚುತ್ತಿರುವ ತಾಪಮಾನವು ಪಕ್ಷಿಗಳ ಸಂತಾನೋತ್ಪತ್ತಿ ಮತ್ತು ಗೂಡುಕಟ್ಟುವ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಕೆಲವು ಪಕ್ಷಿಗಳಿಗೆ ಹೊಂದಿಕೆಯಾಗದೆ ಅವುಗಳ ಉಳಿವಿಗೆ ಸವಾಲಾಗಿದೆ. ಆಕ್ರಮಣಕಾರಿ ಪಕ್ಷಿ ಪ್ರಭೇದಗಳ ವಲಸೆ ಬರುವಿಕೆ ಮತ್ತು ಅವುಗಳ ನೆಲೆಯಿಂದ ಸ್ಥಳೀಯ ಪಕ್ಷಿಗಳು ಸಂಪನ್ಮೂಲಗಳಿಗಾಗಿ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಗಿ, ಈ ಪರಿಸ್ಥಿತಿಯು ಪರಿಸರ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಸ್ಥಳೀಯ ಪಕ್ಷಿ ಸಂಕುಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಪ್ರಗತಿಪರ ಕ್ರಮವನ್ನು ರೂಪಿಸುವ ಭರವಸೆ: ಈ ಅಪಾಯಗಳನ್ನು ಎದುರಿಸಲು, ಭಾರತವು ಪಕ್ಷಿ ಸಂರಕ್ಷಣೆಯಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಭಾರತ ಸರ್ಕಾರವು ಪ್ರಸ್ತಾಪಿಸಿದ ದಶವಾರ್ಷಿಕ ಯೋಜನೆಯಾದ- “ದೇಶದಲ್ಲಿನ ಪಕ್ಷಿ ವೈವಿಧ್ಯತೆ, ಅವುಗಳ ಪರಿಸರ ವ್ಯವಸ್ಥೆಗಳು, ಆವಾಸಸ್ಥಾನಗಳು ಮತ್ತು ಭೂದೃಶ್ಯಗಳ ಸಂರಕ್ಷಣೆಗಾಗಿ ದೂರದೃಷ್ಟಿಯ ದೃಷ್ಟಿಕೋನ ಯೋಜನೆ (2020-2030)” ಎಂಬ ಯೋಜನೆಯು ಭಾರತದಲ್ಲಿ ಪಕ್ಷಿಗಳು ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯ ಬಗ್ಗೆ ಪ್ರಗತಿಪರ ಕ್ರಮವನ್ನು ರೂಪಿಸುವ ಭರವಸೆಯನ್ನು ಹೊಂದಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್, ಚಿತ್ರ ಕೃಪೆ: ಎಸ್.ಕೆ.ಅರುಣ್

ವೈಜ್ಞಾನಿಕ ಮಧ್ಯಸ್ಥಿಕೆ: ಈ ಯೋಜನೆಯು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು, ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ಪಕ್ಷಿಗಳ ಪ್ರಭೇದಗಳ ಚೇತರಿಕೆ ಕಾರ್ಯಕ್ರಮಗಳಿಗೆ ನಾಂದಿಹಾಡಲು, ಅವುಗಳ ಕ್ಷೀಣಿಸುತ್ತಿರುವ ಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ ಭೂದೃಶ್ಯ ವಿಧಾನದ ಪರಿಚಯಕ್ಕಾಗಿ ಅಲ್ಪ, ಮಧ್ಯಮ ಮತ್ತು ದೀರ್ಘಕಾಲೀನ ಯೋಜನೆಗಳ ಸರಣಿಯನ್ನು ಪ್ರಸ್ತಾಪಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುವ ಮಾನವಜನ್ಯ ಚಟುವಟಿಕೆಗಳು ಜಾಗತಿಕ ಮಟ್ಟದಲ್ಲಿ ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು, ಈ ಪಕ್ಷಿ ಸಂಕುಲದ ಮೇಲೆ ಅಂತಹ ಪರಿಣಾಮಗಳ ನಿಯಂತ್ರಣಕ್ಕಾಗಿ ವೈಜ್ಞಾನಿಕ ಮಧ್ಯಸ್ಥಿಕೆಗಳನ್ನು ಒತ್ತಾಯಿಸುತ್ತದೆ ಎಂದು ಈ ಯೋಜನೆ ತಿಳಿಸುತ್ತದೆ.

Over 50 percent of Indian birds at long-term risk: Report | India News – India TVಕಠಿಣ ಕಾನೂನು: ನಿರ್ಣಾಯಕ ಆವಾಸಸ್ಥಾನಗಳನ್ನು ರಕ್ಷಿಸುವ ಪ್ರಯತ್ನಗಳಿಗೆ ಭಾರತವು ಸದಾ ಆದ್ಯತೆ ನೀಡಿದೆ. ಅವುಗಳಲ್ಲಿ ಜೌಗುಭೂಮಿ ಪುನಃಸ್ಥಾಪನೆ, ಮರು ಅರಣ್ಯೀಕರಣ ಉಪಕ್ರಮಗಳು ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಕೆಲವು ತಂತ್ರಗಳಾಗಿವೆ. ಇದಲ್ಲದೆ, ಪಕ್ಷಿಗಳ ರಕ್ಷಣೆಗೆ ಕಳ್ಳಬೇಟೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದ ವಿರುದ್ಧ ಭಾರತವು ಕಠಿಣ ಕಾನೂನುಗಳನ್ನು ರೂಪಿಸಿದೆ.

ಭೂದೃಶ್ಯ ವಿಧಾನ: ಭಾರತವು 2017-2031ರ ಮೂರನೇ ರಾಷ್ಟ್ರೀಯ ವನ್ಯಜೀವಿ ಕ್ರಿಯಾ ಯೋಜನೆಯನ್ನು 2016ರಲ್ಲಿ ಅನಾವರಣಗೊಳಿಸಿತು, ಇದು ವನ್ಯಜೀವಿ ಸಂರಕ್ಷಣೆಯ ಭವಿಷ್ಯದ ನಕ್ಷೆಯನ್ನು ವಿವರಿಸುತ್ತದೆ. ವನ್ಯಜೀವಿಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಸಂಬಂಧಿಸಿದ ಕಾಳಜಿಗಳನ್ನು ಭಾರತವು ಇದೇ ಮೊದಲ ಬಾರಿಗೆ ಗುರುತಿಸಿದ್ದು, ಈ ನಿಟ್ಟಿನಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸಿ, ವನ್ಯಜೀವಿ ನಿರ್ವಹಣಾ ಯೋಜನಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರೂಪಿಸಲು ಒತ್ತು ನೀಡಿರುವ ಕಾರಣದಿಂದಾಗಿ ಈ ಯೋಜನೆಯು ವಿಶಿಷ್ಟವಾಗಿದೆ. ಈ ಯೋಜನೆಯು ಪರಿಸರ ಮೌಲ್ಯವನ್ನು ಹೊಂದಿರುವ ಎಲ್ಲಾ ವನ್ಯಜೀವಿಗಳ ಸಂರಕ್ಷಣೆಯಲ್ಲಿ “ಭೂದೃಶ್ಯ ವಿಧಾನ”ವನ್ನು ಅಳವಡಿಸಿಕೊಳ್ಳುತ್ತದೆ.

1000+ Indian Birds Pictures | Download Free Images on Unsplashಪ್ರಯತ್ನಗಳು ಅತ್ಯಗತ್ಯ: ಭಾರತದ ವೈವಿಧ್ಯಮಯ ಪಕ್ಷಿ ಸಂಕುಲವು ದೇಶದ ನೈಸರ್ಗಿಕ ಸಂಪತ್ತಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಈ ಸುಂದರ ಪಕ್ಷಿಗಳು ಆವಾಸಸ್ಥಾನದ ನಷ್ಟದಿಂದ ಹಿಡಿದು ಹವಾಮಾನ ಬದಲಾವಣೆಯವರೆಗೆ ಅನೇಕ ಅಪಾಯಗಳನ್ನು ಎದುರಿಸುತ್ತಿವೆ. ಅವುಗಳ ಭವಿಷ್ಯವನ್ನು ರಕ್ಷಿಸಲು ಸಂರಕ್ಷಣಾ ಪ್ರಯತ್ನಗಳು ಅತ್ಯಗತ್ಯವಾಗಿವೆ.

ಸಂರಕ್ಷಿತ ಪ್ರದೇಶಗಳು, ಕಾನೂನು ಕ್ರಮಗಳು, ಆವಾಸಸ್ಥಾನದ ಪುನಃಸ್ಥಾಪನೆ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ, ಭಾರತವು ತನ್ನ ಪಕ್ಷಿ ಸಂಕುಲಗಳ ಪರಂಪರೆಯನ್ನು ರಕ್ಷಿಸಲು ಅವಿರತ ಸೇವೆ ಸಲ್ಲಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಈ ಪ್ರಯತ್ನಗಳನ್ನು ಬೆಂಬಲಿಸಿ ಅವುಗಳಲ್ಲಿ ಭಾಗವಹಿಸುವ ಮೂಲಕ ಪಕ್ಷಿಗಳ ಭವಿಷ್ಯವನ್ನು ರಕ್ಷಿಸಲು ಕೊಡುಗೆ ನೀಡಬಹುದು. ಭಾರತದ ಭವಿಷ್ಯದ ತಲೆಮಾರುಗಳಿಗೆ ತನ್ನ ಆಗಸವು ಅಮೂಲ್ಯ ಪಕ್ಷಿಗಳ ಬಣ್ಣಗಳು ಮತ್ತು ಅವುಗಳ ಇಂಪಾದ ಹಾಡುಗಳಿಂದ ತುಂಬಿರುವಂತೆ ನೋಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!