February 5, 2026
Thursday, February 5, 2026
spot_img

ತೈಲ ಖರೀದಿಸೋಕೆ ಭಾರತಕ್ಕೆ ಫುಲ್ ಫ್ರೀಡಂ ಇದೆ: ಹೀಗಂದಿದ್ದು ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಚ್ಚಾ ತೈಲ ಖರೀದಿ ವಿಷಯದಲ್ಲಿ ಭಾರತವು ತನ್ನ ಅಗತ್ಯಕ್ಕೆ ಅನುಗುಣವಾಗಿ ಯಾವ ದೇಶವನ್ನು ಆಯ್ಕೆ ಮಾಡಬೇಕೆಂಬುದನ್ನು ತಾನೇ ನಿರ್ಧರಿಸುವ ಹಕ್ಕು ಹೊಂದಿದೆ ಎಂದು ರಷ್ಯಾ ತಿಳಿಸಿದೆ. ಈ ವಿಷಯದಲ್ಲಿ ಅನಗತ್ಯ ಊಹಾಪೋಹಗಳಿಗೆ ಅವಕಾಶವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಭಾರತಕ್ಕೆ ಇಂಧನ ಪೂರೈಕೆ ಮಾಡುವ ಏಕೈಕ ದೇಶ ರಷ್ಯಾ ಅಲ್ಲ, ಭಾರತ ಹಲವು ವರ್ಷಗಳಿಂದ ವಿಭಿನ್ನ ದೇಶಗಳಿಂದಲೇ ತೈಲವನ್ನು ಖರೀದಿಸುತ್ತಿದೆ. ಆದ್ದರಿಂದ ಖರೀದಿ ಮೂಲಗಳಲ್ಲಿ ಬದಲಾವಣೆ ಕಂಡುಬಂದರೂ ಅದು ಹೊಸದಲ್ಲ ಎಂದು ಅವರು ತಿಳಿಸಿದ್ದಾರೆ. ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನಮಗೆ ಸಿಕ್ಕಿಲ್ಲ ಎಂದು ಪೆಸ್ಕೋವ್ ಪುನರುಚ್ಚರಿಸಿದರು.

ಇದನ್ನೂ ಓದಿ:

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡುವ ವೇಳೆ, ಭಾರತವು ಮುಂದಿನ ದಿನಗಳಲ್ಲಿ ಅಮೆರಿಕ ಹಾಗೂ ವೆನೆಜುವೆಲಾದಿಂದ ಹೆಚ್ಚು ತೈಲ ಖರೀದಿಸಬಹುದು ಎಂದು ಹೇಳಿದ್ದರು. ಈ ಹೇಳಿಕೆಗಳ ನಡುವೆ ರಷ್ಯಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !