122 ವರ್ಷಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಾರ್ಷಿಕ ಸರಾಸರಿ ತಾಪಮಾನವು ಕಳೆದ 122 ವರ್ಷಗಳ ಅವಧಿಯಲ್ಲಿ ಇದೇ ಮೊದಲಬಾರಿಗೆ ಅತ್ಯಧಿಕ ಪ್ರಮಾಣವನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಶಾಖದ ಅಲೆ(ಹೀಟ್‌ ವೇವ್)‌ಗಳ ಪರಿಣಾಮದಿಂದಾಗಿ ಮಾರ್ಚನಲ್ಲಿ ವಾಯವ್ಯ ಭಾರತದ ತಾಪಮಾನದಲ್ಲಿ ಏರಿಕೆಯಾಗಿದೆ. ಇದು 1900 ನೆ ಇಸವಿಯಿಂದ ಇಲ್ಲಿಯವರೆಗೆ ದಾಖಲಾದ ಗರಿಷ್ಟ ಪ್ರಮಾಣವಾಗಿದೆ. ಮೇ ತಿಂಗಳಲ್ಲಿ ಈ ಪ್ರಮಾಣವು ಸರಾಸರಿಗಿಂತ ತುಸು ಇಳಿಕೆಯಾಗಬಹುದು ಎಂದು ಊಹಿಸಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಮೇ ತಿಂಗಳಲ್ಲಿ ಪಶ್ಚಿಮದ ಅಡಚಣೆ (ವೆಸ್ಟರ್ನ್‌ ಡಿಸ್ಟರ್ಬನ್ಸ್)‌ ಗಳ ಪರಿಣಾಮದಿಂದಾಗಿ ವಾಯವ್ಯ ಭಾಗಗಳಲ್ಲಿ ಗಣನೀಯವಾಗ ಇಳಿಕೆಯಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!