ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಭಾರತ ಹಾಕಿ 360’ ಉತ್ಸವವು ಜಾಗತಿಕ ಐಸ್ ಹಾಕಿ ಮತ್ತು ರೋಲರ್ ಹಾಕಿ ನಾಯಕರನ್ನು ಆಗಸ್ಟ್ 1-2 ರಂದು ಚಂಡೀಗಢಕ್ಕೆ ಕರೆತರಲಿದೆ.
ಮುಂಬೈ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕಚೇರಿಗಳನ್ನು ಹೊಂದಿರುವ ‘ತುಲ್ಸಿಯಾ ಸ್ಪೋರ್ಟ್ಸ್ ಮಾರ್ಕೆಟಿಂಗ್’ (TSM) ಹಾಗೂ NHL ಪ್ರಸಾರಕ ರಂದೀಪ್ ಜಂಡಾ ಸಹ-ಸಂಘಟನೆಯಲ್ಲಿ ಈ ಉತ್ಸವ ನಡೆಯಲಿದೆ. ತಳಮಟ್ಟದ ಆಟಗಾರರ ಅಭಿವೃದ್ಧಿ ಹಾಗೂ ತರಬೇತಿ ಮೂಲಕ ಭಾರತದ ಐಸ್ ಮತ್ತು ರೋಲರ್ ಹಾಕಿ ಸಮುದಾಯವನ್ನು ಜಾಗತಿಕ ಮಟ್ಟದೊಂದಿಗೆ ಬೆಸೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಭಾರತ ಮತ್ತು ಉತ್ತರ ಅಮೆರಿಕಾದ ಹಾಕಿ ಪ್ರಪಂಚದ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಇದು ಉತ್ತಮ ಅವಕಾಶ ಎಂದು ಜಂಡಾ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಷನಲ್ ಹಾಕಿ ಲೀಗ್ (NHL), ವ್ಯಾಂಕೋವರ್ ಕ್ಯಾನಕ್ಸ್ ಮತ್ತು ಬಾಯರ್ ಹಾಕಿ ಮುಂಚೂಣಿಯಲ್ಲಿರುವಂತೆ, ಐಸ್ ಹಾಕಿ ಅಸೋಸಿಯೇಷನ್ ಆಫ್ ಇಂಡಿಯಾ (IHAI), ಹೆಚ್ಚುವರಿ NHL ಸಂಸ್ಥೆಗಳು, ಹಾಕಿ ಪಾಲುದಾರರು ಮತ್ತು ಜಾಗತಿಕವಾಗಿ ಐಸ್ ಹಾಕಿ ಹಾಗೂ ರೋಲರ್ ಹಕಿಯನ್ನು ಬೆಳೆಸಲು ಬದ್ಧವಾಗಿರುವ ಸಮುದಾಯ ಬೆಂಬಲಿಗರಿಂದ ಈ ಉತ್ಸವಕ್ಕೆ ಬೆಂಬಲ ದೊರೆತಿದೆ.
ಇದನ್ನೂ ಓದಿ:
ಅಬಾಟ್ಸ್‌ಫೋರ್ಡ್ ಕ್ಯಾನಕ್ಸ್‌ನ ಕಾಲ್ಡರ್ ಕಪ್ ಚಾಂಪಿಯನ್‌ಶಿಪ್ ವಿಜೇತ ತರಬೇತಿ ಸಿಬ್ಬಂದಿಯ ಸದಸ್ಯರಾದ ವಿಶೇಷ ತರಬೇತುದಾರ ಹ್ಯಾರಿ ಮಹೇಶ್ ಅವರು ಆಟಗಾರರ ಅಭಿವೃದ್ಧಿ ಅಧಿವೇಶನಗಳ (ಸಭೆಗಳ) ನೇತೃತ್ವ ವಹಿಸಲಿದ್ದು, ತರಬೇತುದಾರರ ಶೃಂಗಸಭೆಯ ಸಮಯದಲ್ಲಿ ವೃತ್ತಿಪರ ತರಬೇತಿಯ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
ದಕ್ಷಿಣ ಏಷ್ಯಾದ ವಲಸಿಗರೊಂದಿಗೆ ಕ್ರೀಡಾ ಸಂಸ್ಥೆಗಳನ್ನು ತೊಡಗಿಸಲು TSM ಸಹಾಯ ಮಾಡುತ್ತದೆ. ‘ಭಾರತ ಹಾಕಿ 360’ ಅದರ ಮುಂದುವರಿಕೆಯಾಗಿದ್ದು, ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪಾಲುದಾರರನ್ನು ಒಗ್ಗೂಡಿಸಿ ಕ್ರೀಡೆಯ ಮೇಲೆ ಶಾಶ್ವತ ಪರಿಣಾಮ ಬೀರಲು ನಾವು ಅವಕಾಶ ಸೃಷ್ಟಿಸುತ್ತಿದ್ದೇವೆ ಎಂದು ವಾಮನ್ ಹೇಳಿದ್ದಾರೆ.
ಜಂಡಾ ಮಾತನಾಡಿ ಹಾಕಿ ನನ್ನ ವೃತ್ತಿಜೀವನದುದ್ದಕ್ಕೂ ಸಾಕಷ್ಟು ಅವಕಾಶಗಳನ್ನು ನೀಡಿದೆ. ಭಾರತ ಹಾಕಿ 360 ಅನ್ನು ಚಂಡೀಗಢಕ್ಕೆ ತರುವುದು ವಿಶೇಷವಾಗಿ ಅರ್ಥಪೂರ್ಣವಾಗಿದೆ ಎಂದಿದ್ದಾರೆ.



