ಭಾರತ ನನ್ನ ಭಾಗ, ನಾನು ಎಲ್ಲಿಗೆ ಹೋದರೂ ಅದು ನನ್ನ ಜೊತೆಯೇ ಇರುತ್ತದೆ: ಸುಂದರ್ ಪಿಚೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ನನ್ನ ಜೀವನದ ಭಾಗವಾಗಿದೆ. ನಾನು ಎಲ್ಲಿಗೆ ಹೋದರೂ ಭಾರತ ನನ್ನ ಜೊತೆ ಇದ್ದೇ ಇರುತ್ತದೆ. ಎಲ್ಲಿಗೆ ಹೋದರೂ ಭಾರತವನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಸುಂದರ್ ಪಿಚೈ ಅವರಿಗೆ ಅಮೆರಿಕದ ಭಾರತೀಯ ರಾಯಭಾರಿಯಿಂದ ಭಾರತದ ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.

ಕುಟುಂಬದವರ ಸಮ್ಮುಖದಲ್ಲಿ ಸುಂದರ್ ಪಿಚೈ ಪದ್ಮಭೂಷಣ ಸ್ವೀಕರಿಸಿದ್ದಾರೆ. ಈ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದ ಈ ರೀತಿ ಗೌರವ ಸ್ವೀಕರಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!